ರಾಷ್ಟ್ರಕವಿ ಕುವೆಂಪು ಅವರ ಆತ್ಮಕತೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಹಳ್ಳಿ ಕುಪ್ಪಳಿಯಲಿ ಜನಿಸಿದ ಬಾಲಕನೊಬ್ಬ ಬೆಳೆದು ಮಹಾಕವಿಯಾದ ರೀತಿಯನ್ನು ವಿವರಿಸುತ್ತದೆ. ಕುವೆಂಪು ಅವರ ಬಾಲ್ಯ- ವಿದ್ಯಾರ್ಥಿ ಜೀವನ -ಕವಿಯಾಗಿ ಬೆಳೆದ ರೀತಿಯನ್ನು ಅವರದೇ ಬರವಣಿಗೆಯಲ್ಲಿ ಅರಿಯಬಹುದು. ಕುವೆಂಪು ಅವರು ನೆನಪುಗಳ ಮೂಲಕ ಕಟ್ಟಿರುವ ಈ ಅನುಭವ ಕಥನ ವಿಭಿನ್ನ ಓದಿಗೆ ಅನುವು ಮಾಡಿಕೊಡುತ್ತದೆ.
ಮಲೆನಾಡು-ಮೈಸೂರುಗಳ ಸೊಗಸಾದ ಚಿತ್ರಣ ಮಾತ್ರವಲ್ಲದೆ ಕನ್ನಡ ನಾಡಿನಲ್ಲಿ ನಡೆದ ಬೆಳವಣಿಗೆ-ಬದಲಾವಣೆಗಳಿಗೆ ಸಾಕ್ಷಿಯಾದ ಕುವೆಂಪು ಅದನ್ನು ಸೊಗಸಾದ ರೀತಿಯಲ್ಲಿ ವಿವರಿಸಿದ್ದಾರೆ. ಮೊದಲಿಗೆ ಎರಡು ಭಾಗಗಳಲ್ಲಿ ಮುದ್ರಣವಾಗಿದ್ದ ’ನೆನಪಿನ ದೋಣಿಯಲ್ಲಿ’ ಈ ಸಂಯುಕ್ತ ಸಂಪುಟವಾಗಿ ಪ್ರಕಟವಾಗಿದೆ.
©2024 Book Brahma Private Limited.