ತ್ರಿಮುಖಿ- ಕೃತಿಯು ‘ನೆನಪುಗಳ ಹಾದಿಯಲ್ಲಿ’ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಸಿ.ಆರ್.ಸತ್ಯ ಅವರ ಆಯ್ದ ಕೆಲವು ರೋಚಕ ಅನುಭವಗಳ ಸಂಕಲನ. ಅತ್ಯಂತ ಸ್ವಾರಸ್ಯಕರ ಹಾಗೂ ಸ್ಫೂರ್ತಿದಾಯಕ ಪುಸ್ತಕ ಇದಾಗಿದ್ದು, ಕೇರಳದಲ್ಲಿನ ಜೀವನ, ವಿದೇಶ ಪ್ರವಾಸಗಳು ಹಾಗೂ ಬೆಂಗಳೂರಿನಲ್ಲಿ ಅವರಿಗಾದ ಒಡನಾಟಗಳು ಈ ಪುಸ್ತಕದ ತಿರುಳು. ಈ ಸಂಕಲನದಲ್ಲಿ ಖ್ಯಾತ ಗಣ್ಯರಾದ ವಿಕ್ರಂ ಸಾರಭಾಯಿ, ಅಬ್ದುಲ್ ಕಲಾಂ,ರತನ್ ಟಾಟಾ, ಟ್ರಾವಂಕೂರ ಮಹಾರಾಜರು, ಸಾಹಿತಿಗಳು , ಸಂಗೀತಗಾರರು - ಇವರೊಡನೆ ನಡೆದ ರಸಮಯ ಘಟನೆಗಳನ್ನು ಬಿಂಬಿಸಲಾಗಿದೆ. "ತುಂಬಾ” ದಲ್ಲಿ ರಾಕೆಟ್ ನ ನೋಸ್ ಕೋನನ್ನು ಸೈಕಲ್ ಮೇಲೆ ಕೊಂಡೊಯ್ಯುವ ಘಟನೆ, "ಅನಂತಶಯನ" ದಲ್ಲಿ ಸಂಶೋಧನೆ, ದಿನ ನಿತ್ಯ ಜೀವನದಲ್ಲಿ ಕೇರಳೀಯರೊಡನೆ ಆದ ಅನುಭವಗಳ ಸಾರವಿದೆ. ಒಬ್ಬ ಬಾಹ್ಯಾಕಾಶ ತಂತ್ರಜ್ಞರಾಗಿ, ರಾಕೆಟ್ ಗಳೊಡನೆ ಆದ ಸನ್ನಿವೇಶಗಳೂ ಇವೆ. ಇವಲ್ಲದೇ, ಸತ್ಯ ಕನ್ನಡದಲ್ಲಿ ಬರಹಗಾರರಾಗಿ ಮೂಡಿಬಂದ ಕೆಲವು ವಿಶೇಷ ಸಂಗತಿಗಳ ( ಪ್ರಸಿದ್ಧ ಹಾಸ್ಯ ಕವನ " ಆಚೇ ಮನೆ ಸುಬ್ಬಮ್ಮಂಗೆ ಇವತ್ತು ಏಕಾದ್ಸಿ ಉಪ್ವಾಸ" ಇವರದ್ದೇ) ಬಗ್ಗೆ ಮಾಹಿತಿ ನೀಡಿದ್ದಾರೆ. ವಿದೇಶ ಪ್ರವಾಸದಲ್ಲಾದ ಕೆಲವು ಹಾಸ್ಯಮಯ ಘಟನೆಗಳು, ಅವರ ಪರಿಸರ ಪ್ರಜ್ಞೆ, ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಪ್ರಚಾರ, ಎ.ಕೆ.47 ಬಂದೂಕು, ಗುಂಡುಗಳೊಡನೆ ಪಡೆದ ಅನುಭವ -ಹೀಗೆ ಅವರ ಇತರ ಚಟುವಟಿಕೆಗಳ ತುಣುಕುಗಳು ಓದುಗರಿಗೆ ರಸಮಯವಾಗಿವೆ.
©2024 Book Brahma Private Limited.