ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ-ಹಳ್ಳಿಯ ಚಿತ್ರಗಳು. ಗೊರೂರು ಅವರ ಸಾಹಿತ್ಯಕ ಕೃತಿಗಳೆಂದರೆ ಅಥವಾ ಬರಹಗಳೆಂದರೆ ಅವು ಗ್ರಾಮೀಣ ಸೊಗಡಿನಿಂದ ಕಂಗೊಳಿಸುತ್ತಿರುತ್ತವೆ. ಇಲ್ಲಿ ಅನುಭವದ ಪಾಕವೇ ಸಿದ್ಧವಾಗಿರುತ್ತದೆ. ಹಳ್ಳಿಯ ಜನಜೀವನ ಎಷ್ಟೊಂದಸು ಕಷ್ಟಕರ ಎಂಬುದನ್ನು ಮಾತ್ರವಲ್ಲ; ಹಳ್ಳಿಯ ಬದುಕೇ ನೆಮ್ಮದಿಯ ಜೀವನ ಸಾರ್ಥಕತೆಗೆ ಪೂರಕ ಎಂಬಂತೆಯೂ ಇರುತ್ತವೆ. ಬಸ್ಸು ಬರುವುದು ತಡವಾಗುವುದು, ಅದಕ್ಕಾಗಿ ದಿನವಿಡೀ ಕಾಯುವ ಅನಿವಾರ್ಯತೆ, ಅದನ್ನು ನಿಲ್ಲಿಸಬೇಕೆಂದರೆ ಪಡುವ ಹರಸಾಹಸಗಳು ಎಲ್ಲವೂ ರಂಜನೀಯವಾಗಿ ಅಷ್ಟೇ ಗಂಭೀರ ಸಮಸ್ಯೆಯಾಗಿಯೂ ಹಳ್ಳಿಗರ ಬದುಕನ್ನು ಚಿತ್ರಿಸುತ್ತಾರೆ. ಇಂತಹ ಘಟನೆ-ಸನ್ನಿವೇಶಗಳ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ.
©2024 Book Brahma Private Limited.