ನಗರ ಮಾನವನ ದೈನಂದಿನ ನಡವಳಿಕೆಗಳು, ಕಾಲದ ಸ್ಥಿತ್ಯಂತರಗಳಿಗೆ ಆತನ ಸ್ಪಂದನೆ, ಆಲೋಚನಾ ಕ್ರಮದ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ದೈನಂದಿನ ಸಣ್ಣ ಸಣ್ಣ ಘಟನೆಗಳು, ಅಲ್ಲಿ ಮನುಷ್ಯನ ಸಂಭಾಷಣೆಗಳು ಕತೆಯ ರೂಪ ಪಡೆದಂತೆ ನಮ್ಮ ಮುಂದೆ ನಿಲ್ಲುತ್ತವೆ. ಈ ಸಂಕಲನದಲ್ಲಿ 85 ಕತೆಗಳು ಇವೆ.
ಸತ್ಯೇಶ್ ಎನ್.ಬೆಳ್ಳೂರ್ ಅಂತರಾಷ್ಟ್ರೀಯ ಕಂಪನಿ ಒಂದರಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಣ ಬರುವ ವೃತ್ತಿಯಾದರೂ ಸೃಜನಶೀಲತೆ ಉಳಿಸಿಕೊಳ್ಳುವ ಬಗೆಯನ್ನು ಇಲ್ಲಿರುವ ಕಥೆಗಳು ವಿವರಿಸುತ್ತದೆ.
ನವ್ಯಜೀವಿ ಎಂಬ ಅಂಕಿತದಲ್ಲಿ ಬರೆಯುವ ಸತ್ಯೇಶ್ ಎನ್. ಬೆಳ್ಳೂರ್ ಅವರು 1021ಮುಕ್ತಕಗಳನ್ನು ಬರೆದಿದ್ದಾರೆ. ತುಂತುರು ಎನ್ನುವ ಹನಿಗವನ ಸಂಗ್ರಹ, ಪುಟಪಾಕ ಎನ್ನುವ ಕಿರುಕತೆಗಳ ಸಂಗ್ರಹ. ಬೋರ್ಡ್‌ರೂಮಿನ ಸುತ್ತ, ಸ್ಟಾರ್ಟ್‌ಅಪ್ ನೀವೂ ಕಟ್ಟಬಹುದು, ಪಯಣಿಗ ಅವರ ಪ್ರಕಟಿತ ಕೃತಿಗಳು. ...
READ MORE