ಲೇಖಕಿ ವೀಣಾ ಬನ್ನಂಜೆ ಅವರ ’ ನನ್ನ ಜೀವ ನನ್ನ ಅಪ್ಪ’ ಕೃತಿಯು ನೆನಪಿನ ಬುತ್ತಿಯ ಬರವಣಿಗೆಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು, ‘ವೀಣಾ ಬನ್ನಂಜೆ ಎಂಬ ಮಾತೃಶಕ್ತಿಯ ಅಂತಃಕರಣವು ಈ ಪುಸ್ತಕದ ಕೇಂದ್ರ ನೆಲೆಯಾಗಿದ್ದು, ’ಬನ್ನಂಜೆ’ ಎಂಬ ಮಹಾಮನೀಷಿಯ ಮಗಳಾಗಿ ಕಂಡುಂಡ ನೆನಪುಗಳ ರಸಪಾಕವೇ ನನ್ನ ಜೀವ ನನ್ನ ಅಪ್ಪ. ತಮಗೆ ಕಂಡ ಸತ್ಯದ ಕನ್ನಡಿಯನ್ನು ಪರಿಶುಭ್ರವಾಗಿ ನಮಗೆ ಇಲ್ಲಿ ಕಾಣಿಸುತ್ತಾರೆ. ಬನ್ನಂಜೆ ಉತ್ಪ್ರೇಕ್ಷೆಗೆ ಸಿಗುವವರಲ್ಲ; ಸ್ವಬಾವೋಕ್ತಿಗೆ ಮಾತ್ರ ಕಾಣಿಸುವವರು. ಅವರ ವ್ಯಕ್ತಿತ್ವ ಎಲ್ಲರನ್ನೂ ಸೆಳೆಯುತ್ತದೆ. ಅಲ್ಲಿ ಸಂನ್ಯಾಸಿಗಳೂ, ವಿದಗ್ಧರೂ, ಕಿರಿಯರು ಹಿರಿಯರೂ ಎಲ್ಲರೂ ಇದ್ದಾರೆ. ವೀಣಾ ಇಲ್ಲಿ ಅಪ್ಪನ ಜೀವಕಾರುಣ್ಯವನ್ನು ಓದುಗರಿಗೆ ತೋರಿಸಿದ್ದು, ಈ ಕೃತಿಯು ಪುಟ್ಟ ಕನ್ನಡಿಯಾಗಿ ಸತ್ಯದ ತೋರ್ಪಡಿಕೆಯನ್ನು ವಿವರಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.