ಪ್ರಾಣಿಗಳೇ ಗುಣದಲಿ ಮೇಲು!

Author : ಗವಿಸ್ವಾಮಿ ಎನ್

Pages 160

₹ 150.00




Year of Publication: 2022
Published by: ಪಶುಪಕ್ಷಿ ಪ್ರಕಾಶನ
Address: ಬಿ.ಎ/58, ಕೆ.ಎಚ್.ಬಿ ಕಾಲೋನಿ, ಪಿಡಬ್ಯ್ಲೂಕ್ವಾಟ್ರಸ್, ಕಾವಲ್ ಭೈರಸಂದ್ರ, ಆರ್.ಟಿ.ನಗರ, ಬೆಂಗಳೂರು-560032
Phone: 8277325868

Synopsys

‘ಪ್ರಾಣಿಗಳೇ ಗುಣದಲಿ ಮೇಲು!’ ಪಶುವೈದ್ಯ ಡಾ. ಗವಿಸ್ವಾಮಿ ಎನ್ ಅವರ ಅನುಭವ ಕಥನ. ಈ ಕೃತಿಗೆ ಖ್ಯಾತ ಲೇಖಕ ಜೋಗಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಇದೊಂದು ಮಾನವೀಯಗೊಳಿಸುವ ಅನುಭವ ಕಥನ ಎಂದಿದ್ದಾರೆ ಜೋಗಿ. ಜೊತೆಗೆ ಪ್ರಾಣಿ ಜಗತ್ತಿನ ಕುರಿತು ನನ್ನ ಬೆರಗು ಮತ್ತು ಪ್ರೀತಿಯನ್ನು ಹೆಚ್ಚಿಸಿದವರು ಇಬ್ಬರು, ಯಾವ್ಯಾವುದೋ ದ್ವೀಪಗಳಿಗೆ ಹೋಗಿ ಅಲ್ಲಿರುವ ಪ್ರಾಣಿಗಳನ್ನು ಹುಡುಕಿಸಿ, ಖರೀದಿಸಿ ತಂದು ಅವುಗಳನ್ನು ಲಂಡನ್ ಮತ್ತು ಇತರ ಪ್ರಾಣಿ ಸಂಗ್ರಹಾಲಯಗಳಿಗೆ ಕೊಡುತ್ತಿದ್ದ ಜೆರಾಲ್ಡ್ ಡ್ಯುರೆಲ್ ಮತ್ತು ಜೇಮ್ಸ್ ಹೇರಿಯಟ್ ಎಂಬ ಗುಪ್ತ ಹೆಸರಲ್ಲಿ ಮೂವತ್ತು ಪುಸ್ತಕಗಳನ್ನು ಬರೆದ ಜೆರಾಲ್ಡ್ ಪ್ರಾಣಿಪ್ರಿಯತೆಯಂತೂ ಅಪೂರ್ವ. ಜೆಮ್ಸ್ ಹೇರಿಯಟ್ ಬರೆದ It Shouldn’t Happen to a vet ಪಶುವೈದ್ಯನ ಅನುಭವಗಳನ್ನು ತಮಾಷೆಯಾಗಿಯೂ ಸಹಾನುಭೂತಿಯಿಂದಲೂ ಹೇಳುವ ಕೃತಿ. ಯಾವತ್ತೂ ವೃತ್ತಿ ಜೀವನದ ಅನುಭವಗಳು ಸೊಗಸಾಗಿ ಓದಿಸಿಕೊಳ್ಳುತ್ತವೆ. ಅವು ನಮ್ಮನ್ನು ಮತ್ತಷ್ಟು ಮಾನವೀಯವೂ ಆಗಿಸುತ್ತವೆ. ಪ್ರಾಣಿಗಳೇ ಗುಣದಲಿ ಮೇಲು ಅಂಥದ್ದೇ ಗುಣ ಇರುವ ಪುಸ್ತಕ. ಇದರ ಉದ್ದಕ್ಕೂ ಡಾ. ಗವಿಸ್ವಾಮಿಯವರಿಗೆ ತಮ್ಮ ವೃತ್ತಿಯ ಮೇಲಿರುವ ಗೌರವ, ಪ್ರಾಣಿಗಳ ಮೇಲಿರುವ ಅಕ್ಕರೆ, ಗ್ರಾಮೀಣ ಪ್ರದೇಶದ ಮಂದಿಯ ಮೇಲಿರುವ ಪ್ರೀತಿ ಎದ್ದು ಕಾಣುತ್ತದೆ. ಅವರೊಂದಿಗೆ ವ್ಯವಹರಿಸಿದಾಗ ಎದುರಾಗುವ ಕಠಿಣ ಪ್ರಸಂಗಗಳು, ಅವುಗಳನ್ನು ತಮಾಷೆ ಮತ್ತು ಲಘು ಧಾಟಿಯಲ್ಲಿ ಪರಿಹರಿಸಿಕೊಳ್ಳುವ ಜಾಣ್ಮೆ ಈ ಕೃತಿಯುದ್ದಕ್ಕೂ ಕಾಣುತ್ತದೆ. ಇದು ಪಶುವೈದ್ಯನೊಬ್ಬನ ಅನುಭವಗಳಷ್ಟೇ ಅಲ್ಲ, ಗ್ರಾಮೀಣ ಕರ್ನಾಟಕದ ಜೀವನ ಚರಿತ್ರೆಯೂ ಹೌದು. ಕನ್ನಡದಲ್ಲಿ ಇಂಥ ಪುಸ್ತಕಗಳು ಅಪರೂಪ. ಇದನ್ನು ಸೊಗಸಾದ ಶೈಲಿಯಲ್ಲಿ, ಮನನೀಯವಾಗಿ ಬರೆದಿರುವ ಡಾ.ಗವಿಸ್ವಾಮಿ ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಗವಿಸ್ವಾಮಿ ಎನ್

ಲೇಖಕ ಡಾ. ಗವಿಸ್ವಾಮಿ ಎನ್. ಅವರು ವೃತ್ತಿಯಲ್ಲಿ ಪಶುವೈದ್ಯರಾಗಿದ್ದಾರೆ. ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಪಶುಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಾಸಿ ಬರಹಗಾರನಾಗಿರುವ ಅವರ ಚೊಚ್ಚಲ ಕೃತಿ "ಚಕ್ರ" ಎಂಬ ಅತಿ ಸಣ್ಣಕಥೆಗಳ ಸಂಕಲನ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆದು ಎರಡನೇ ಮುದ್ರಣ ಕಂಡಿದೆ. ಗವಿಸ್ವಾಮಿ ಅವರ ಎರಡನೇ ಕೃತಿ "ಪ್ರಾಣಿಗಳೇ ಗುಣದಲಿ ಮೇಲು!"  ಅನುಭವ ಕಥನ ಪಶುಪಕ್ಷಿ ಪ್ರಕಾಶನದಿಂದ ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಹೂವಿನಹಡಗಲಿಯ ಟಿ.ಎಂ.ಆರ್ ಪಬ್ಲಿಕೇಷನ್ಸ್ ವತಿಯಿಂದ ಕೊಡಲಾಗುವ ಸುಲೋಚನ ಸಾಹಿತ್ಯ ಪ್ರಶಸ್ತಿ, ಹಾಗೂ ತುಮಕೂರಿನ ಗುರುಕುಲ ಪ್ರತಿಷ್ಠಾನದಿಂದ ಗುರುಕುಲ ...

READ MORE

Related Books