ವೃತ್ತಿಯಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಲೇಖಕರಾದ ಡಿ.ವಿ. ಗುರುಪ್ರಸಾದ್ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾ, ಕೆಲಕಾಲ ಮೂವರು ಮಾಜಿ ಮುಖ್ಯಮಂತ್ರಿಗಳ ಕಣ್ಣು ಕಿವಿಯಾಗಿ ಗುಪ್ತಚರದಳದಲ್ಲಿ ಕೆಲಸ ಮಾಡಿದ್ದಾರೆ. ಆ ಸಮಯದ ನೆನಪುಗಳು, ಕೆಲ ಘಟನೆಗಳನ್ನು ಗೂಢಚರ್ಯೆಯ ಆ ದಿನಗಳು ಕೃತಿಯಲ್ಲಿ ವಿವರಿಸಿದ್ದಾರೆ. ಲೇಖಕರು ತಮ್ಮ ನೆನಪಿನ ಪುಟಗಳಿಂದ ಮುದ್ರಿತ ಪುಟಗಳಿಗೆ ಇಳಿಸಿದ ಈ ಪುಸ್ತಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಗುಂಡೂರಾವ್, ಎಸ್ ಎಂ ಕೃಷ್ಣ ಮತ್ತು ಪ್ರಮುಖವಾಗಿ ಧರಂ ಸಿಂಗ್ ರವರ ಗುಪ್ತಚರ ಅಧಿಕಾರಿಯಾಗಿ ಅವರಿಗೆಲ್ಲಾ ರಾಜ್ಯದ ದೈನಂದಿನ ಚಟುವಟಿಕೆಗಳು ವರದಿ ಮಾಡುವುದು, ಅಲ್ಲಿಂದ ಕುಮಾರಸ್ವಾಮಿ-ದೇವೇಗೌಡ-ಯಡಿಯೂರಪ್ಪ ಕಾಲಾವಧಿಯ ರಾಜಕೀಯ ಬೆಳವಣಿಗೆಗಳು, ಆಗಿನವರ ವಿರೋಧಿ ಮತ್ತು ಸ್ವಪಕ್ಷದವರ ತಂತ್ರ, ಕುತಂತ್ರಗಳು, ತಮ್ಮ ಗುಪ್ತದಳದ ಮೂಲಗಳಿಂದ ಸಂಗ್ರಹಿಸಿದ ಪೂರ್ವ ಚುನಾವಣಾ ಸಮೀಕ್ಷೆಗಳು ಇವೆಲ್ಲಾ ಯಥಾವತ್ತಾಗಿ ವಿವರಿಸಿದ್ದಾರೆ.
©2024 Book Brahma Private Limited.