ಆಂಧ್ರ ಪ್ರದೇಶದಿಂದ ವಲಸೆ ಬಂದ ಉದ್ಯಮಿಗಳ ಕುಟುಂಬವೊಂದು ಕರ್ನಾಟಕದಲ್ಲಿ ಸಾಮಾಜಿಕ ವಲಯಕ್ಕೆ ಕೊಡುಗೆ ನೀಡಿದರ ಕುರಿತ ವಿವರಗಳು ಕೃತಿಯಲ್ಲಿವೆ. ಲೇಖಕಿ ವೇದವತಿ ಕೋದಂಡರಾಂ ತಮ್ಮ ತವರನ್ನು ಅದರ ದಟ್ಟ ವಿವರಗಳನ್ನು ಬಗೆ ಬಗೆಯಾಗಿ ಕಟ್ಟಿಕೊಟ್ಟಿದ್ದಾರೆ. ಸುಮಾರು ಒಂದೂವರೆ ಶತಮಾನದ ಅವಧಿಯ ಸಂಗತಿಗಳನ್ನು ದಾಖಲಿಸುವ ಮೂಲಕ ಆ ಕಾಲದ ಸಾಂಸ್ಕೃತಿಕ ಬದುಕಿನ ವಿವರಗಳನ್ನು ಒದಗಿಸಿದ್ದಾರೆ.
ಕೌಟುಂಬಿಕ ಇತಿಹಾಸ ಎನ್ನುವ ಹೊಸ ಪ್ರಕಾರವೊಂದು ಇದ್ದರೆ ಆ ವರ್ಗಕ್ಕೆ ಸಲ್ಲಬಹುದಾದ ಚಂದದ ಕೃತಿ ಇದು.