ದೇಸಿ ಪುಸ್ತಕ ಮಾಲೆಯಲ್ಲಿ ಪ್ರಕಟವಾದ ಕೃತಿ ನಮ್ಮ ರಕ್ಷಕ ರಕ್ಷಾ. ಕೆಲವು ಸಾಕುಪ್ರಾಣಿಗಳು ಬದುಕಿನ ಬಹುಮುಖ್ಯ ಪುಟಗಳಲ್ಲಿ ಸೇರಿಹೋಗಿರುತ್ತವೆ. ಸಾಕಿದವರನ್ನು ಅಪಾಯಗಳಿಂದ ಸಲಹುವ, ಜೊತೆಗೆ ಇರುವ ಪ್ರಾಣಿಗಳು ಸತ್ತಾಗ ಸಾಕಿದವರಿಗೆ ತಮ್ಮ ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಷ್ಟೇ ನೋವಾಗುವುದು ಸಜಹ. ಅದೇ ರೀತಿ ಹಿರಿಯ ಕಾಫಿ ಬೆೆೆೆಳೆಗಾರರಾದ ಎಸ್.ಎಂ.ಪೆಜತ್ತಾಯವರ ಮನೆಯಲ್ಲಿ ಸಾಕಿದ್ದ ರಕ್ಷಾ ಎಂಬ ಪ್ರೀತಿಯ ನಾಯಿ ತೀರಿಕೊಂಡು ವರ್ಷಗಳೇ ಕಳೆದರೂ ಅದರ ನೆನಪುಗಳನ್ನು ಜೋಪಾನವಾಗಿಟ್ಟು ಆ ಎಲ್ಲವನ್ನು ತಮ್ಮ ಕೃತಿಯ ಮೂಲಕ ದಾಖಲಿಸಿರುವ ವಿಶೇಷ ಕೃತಿ ನಮ್ಮ ರಕ್ಷಕ ರಕ್ಷಾ.
ಎಸ್.ಎಂ.ಪೆಜತ್ತಾಯ-ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಒಂದು ಕಡೆ ಬಾಳೆಹೊಳೆ ಎಂಬ ಊರಿದ್ದರೆ ಮತ್ತೊಂದು ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭ ದೊಡ್ಡದು. ಘಟ್ಟದ ಕೆಳಗೆ (ಶಿರೂರು), ಬಯಲುಸೀಮೆ(ಜಗಳೂರು) ಮತ್ತು ಮಲೆನಾಡು (ಸುಳಿಮನೆ) ಹೀಗೆ ಕರ್ನಾಟಕದ ಎಲ್ಲಾ ಪ್ರದೇಶದ ಕೃಷಿಪದ್ಧತಿಯ ಅರಿವು ಶ್ರೀಯುತರಿಗಿದೆ. ...
READ MORE