ಬ್ರಾಹ್ಮಣನೊಬ್ಬ ಅನಿವಾರ್ಯವಾಗಿ ಕ್ಷೌರಿಕ ವೃತ್ತಿ ಮಾಡಿದ ಪ್ರಸಂಗ ರಸವತ್ತಾಗಿ ಮೂಡಿ ಬಂದಿದೆ. 'ನಾನು ಕ್ಷೌರಿಕನಾದುದು' ಪ್ರಬಂಧವಂತೂ ಮುಖದ ನೆರಿಗೆಗಳನ್ನು ಸಡಿಲಗೊಳಿಸಿ ನಗೆ ಅರಳಿಸುವಷ್ಟು ಸಮರ್ಥವಾಗಿದೆ.ಹಾಸ್ಯ ಸುಖ ಮಾತ್ರವಲ್ಲ ಕ್ಷೌರದ ಹಿಂದಿನ ಸಾಮಾಜಿಕ, ಆರ್ಥಿಕ ಚಿತ್ರಣಗಳೂ ಪ್ರಬಂಧಗಳಲ್ಲಿ ಬಿಂಬಿತವಾಗಿವೆ.ಲೇಖಕರಿಗೆ ತಾವು ದೊಡ್ಡವರಾದ ಮೇಲೆ ಕ್ಷೌರಿಕನಾಗುವ ಹಂಬಲ. ಏಕೆಂದರೆ, ಕ್ಷೌರದ ಸಂದರ್ಭದಲ್ಲಿ ತಾವು ಅನುಭವಿಸಿದ್ದ ಹಿಂಸೆಯನ್ನು ಇನ್ನೊಬ್ಬರಿಗೆ ದಾಟಿಸುವ ಉದಾತ್ತ ಲೆಕ್ಕಾಚಾರ ,ಈ ಪ್ರಬಂಧ ಸಂಕಲನದಲ್ಲಿ 33 ವಿಶೇಷ ಲೇಖನಗಳಿವೆ.
ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್ ಅವರು 1945 ಜೂನ್ 6ರಂದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಹುಟ್ಟಿದರು. ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹದಲ್ಲಿ ತೊಡಗಿಕೊಂಡಿದ್ದಾರೆ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ...
READ MORE