'ನಾ ಬಂದ ಹಾದಿಯಲ್ಲಿ’ ಕೆ.ವಿ. ಘನಶ್ಯಾಮ್ ಅವರ ‘ಅನುಭವ ಕಥನ’. ಇದು ಅಧ್ಯಾಪಕನೊಬ್ಬರ ಅನುಭವ ಕಥನ. ಒಮ್ಮೆ ಅನುಭವ ಮುಖ್ಯವಾಗುತ್ತ, ಇನ್ನೊಮ್ಮೆ ಅರಿವು ಮುಖ್ಯವಾಗುತ್ತ ಮತ್ತೊಮ್ಮೆ ಅನುಭವ ಮತ್ತು ಅರಿವು ಒಂದಾಗುತ್ತ ಅನಾವರಣಗೊಳ್ಳುವ ಅಕ್ಷರ ಪ್ರತಿಭೆಯ ಹಾಸು-ಬೀಸುಗಳನ್ನು ಈ ಕೃತಿಯಲ್ಲಿ ಕಾಣಬಹುದು. ಹಿನ್ನೋಟದ ವಿಧಾನದಲ್ಲಿ ತೆರೆದುಕೊಳ್ಳುವ ಈ ಕೃತಿಯ ಆರಂಭ ಕಥಾಶೈಲಿಯಲ್ಲಿ ಇರುವುದು ಒಂದು ವಿಶೇಷ.
ಲೇಖಕ ಪ್ರೊ. ಕೆ.ವಿ. ಘನಶ್ಯಾಮ ಅವರು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿದ್ದರು. ಡಾ. ಎಚ್. ನರಸಿಂಹಯ್ಯ ಅವರ ಒಡನಾಡಿಗಳು. ‘ನಾ ಬಂದ ಹಾದಿಯಲ್ಲಿ’ ಎಂಬುದು ಅವರ ಅನುಭವ ಕಥನ. ...
READ MORE