ಲೇಖಕ ಸಂತೋಷಕುಮಾರ ಮೆಹೆಂದಳೆ ಅವರು ಬರೆದಿರುವ ಹಿಜಡಾ ಜಗತ್ತಿನ ಅನುಭವ ಕಥನ ಮಂಗಳಮುಖಿಯರ ಸಂಗದಲ್ಲಿ…ಲೇಖಕರು ಹೇಳುವಂತೆ ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.ಮಂಗಳಮುಖಿಯರ ಬದುಕು ಎಷ್ಟು ತಲ್ಲಣ, ಅಸಹನೀಯವೋ ಅದಕ್ಕಿಂತ ಭೀಕರ ದೇಹದ ಕಂಪನ ತಣಿಯದ ಭಾವ ಮತ್ತು ಮನಸ್ಸಿಗೆ ಇಲ್ಲದೆ ಅನುಭೂತಿ, ನೀರು ಕುಡಿದ ಮೇಲೆ ಆಯಾಸ ಪರಿಹಾರ ಎನ್ನಬಹುದೇ ಹೊರತಾಗಿ ವಿವರಿಸಬಲ್ಲ ಭಾಷೆ ನಮ್ಮಲ್ಲಿಲ್ಲ. ಅದೊಂದು ಅನುಭವ.ಹಾಗೆಯೇ ಕಾಮದ ಅನುಭವಕ್ಕೆ ಪಕ್ಕಾದರೆ ಅದ್ಭುತ ಅನುಭವ ಎನ್ನಬಹುದೇ ವಿನಃ ಇದ್ದಮಿತ್ಥಂ ಎಂದು ವರ್ಣಿಸಲಾರ. ಇವೆರಡಕ್ಕೂ ವಂಚಿತನಾಗಿ ಬದುಕು ಭರಿಸಬೇಕಾದ ಪರಿಸ್ಥಿತಿ. ಈ ತ್ರಿಶಂಕು ಸ್ಥಿತಿ ಯಾರಿಗೂ ಬೇಡ, ಮನಸ್ಸಿಗೆ ಹೆಣ್ಣಿನ ಹಂಬಲ, ದೇಹ ಮಾತ್ರ ಗಂಡಸಿನ ಬಿರುಸು. ಭಾವಗಳಂತೂ ಅಲ್ಲೋಲ ಕಲ್ಲೋಲ. ಇತ್ತಾಗೆ ಇದೂ ಇಲ್ಲ. ಅತ್ತಾಗೆ ಅದೂ ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲು ಅವರನ್ನು ರಸ್ತೆಗೆ ಇಳಿಸಿರುತ್ತದೆ. ಅದು ಓಜಡಾಗಳ ಜಗತ್ತು ಎಂಬುದಾಗಿ ಬೆನ್ನುಡಿಯಲ್ಲಿ ಹೇಳಲಾಗಿದೆ.
©2025 Book Brahma Private Limited.