ನಾರಾಯಣಪ್ಪ ಮತ್ತು ನಂಜಮ್ಮನವರ ಜೀವನ ಕಥನ 'ಊರಪ್ಪ ಊರಮ್ಮ'. ಬರೀ ಎರಡನೇ ತರಗತಿಯಷ್ಟೇ ಓದಿದ ನಾರಾಯಣಪ್ಪ, ಅಕ್ಷರದ ಸಂಪರ್ಕಕ್ಕೆ ಬಾರದ ನಂಜಮ್ಮ ಮಕ್ಕಳ- ಮೊಮ್ಮಕ್ಕಳಿಗೆ ಅಕ್ಷರವೇ ಬೆಳಕೆಂಬುದನ್ನು ತೋರಿದವರು. ಈ ಸಮಾಜದಲ್ಲಿ ಬದುಕುತ್ತಲೇ ಬಯಲಶಾಲೆಯಿಂದ ಕಲಿತು ಜೀವನಾನಿಭವವೆಂಬ ವಿಶ್ವವಿದ್ಯಾಲಯದಲ್ಲಿ ಪದವಿ ಗಿಟ್ಟಿಸಿದ ಗಟ್ಟಿಗರು. ದುಡಿಮೆ, ಅಂತಃಕರಣ, ಹೃದಯ ವೈಶಾಲ್ಯತೆ, ಇನ್ನೊಬ್ಬರಿಗೆ ನೆರವಾಗುವ ಹೃದಯವಂತಿಕೆ, ಅದರಾಥಿತ್ಯ, ಮಿತವ್ಯಯ, ಹಂಚಿ ತಿನ್ನುವ ಸಂಸ್ಕಾರ, ದುಡಿಮೆಯಲ್ಲಿ ನಂಬಿಕೆ, ನಿಯತ್ತು, ಮಾನ ಮರ್ಯಾದೆಗಳ ಘನತೆ, ಅಪರೂಪದ ಸ್ವಾಭಿಮಾನ ಈ ಎಲ್ಲಾ ಗುಣ ಸಂಪನ್ನತೆಯಲ್ಲೂ ಅಜ್ಜ-ಅಜ್ಜಿ ಇಬ್ಬರದೂ ಸಮತೂಕದ ಬದುಕು ಯಾವ ವಿಶ್ವವಿದ್ಯಾಲಯ ತಾನೇ ಇಂತಹ ಜೀವನಮೌಲ್ಯಗಳನ್ನು ಕಲಿಸುತ್ತದೆ ಎನ್ನುತ್ತಾರೆ ಎಚ್.ಎಸ್. ಸತ್ಯನಾರಾಯಣ. ಹಳ್ಳಿಯ ಮುಗ್ಧತೆ, ಧಾರ್ಮಿಕ ನಂಬಿಕೆಯ ಜೊತೆಜೊತೆಗೆ ಮಾನವೀಯತೆಯ ಹಾಗೂ ವೈಜ್ಞಾವಿಕ ಚಿಂತನೆಯ ನೇತ್ರದಾನದ ಮಹತ್ವ ತಿಳಿಸುತ್ತಾ. ತಮ್ಮ ಪೂರ್ವಿಕರು ಊರಪ್ಪ-ಊರಮ್ಮನಾದ ಚರಿತ್ರೆಯನ್ನು ಲೇಖಕರು ಸಕಾರಣವಾದ ಹೆಮ್ಮೆಯಿಂದಲೇ ವಂಶವೃಕ್ಷಸಹಿತ ದಾಖಲಿಸಿದ್ದಾರೆ.
©2024 Book Brahma Private Limited.