’ಲೆಗಸಿ’ ಮತ್ತು ’ಲೀಡಿಂಗ್ ಲೇಡಿಸ್’ ನಂತಹ ಪ್ರಸಿದ್ಧ ಪುಸ್ತಕಗಳ ಲೇಖಕಿ ಸುಧಾಮೆನನ್ ಮತ್ತು ಪ್ರತಿಷ್ಠಿತ ’ಇಂಡಿಯಾ ಇನ್ ಕ್ಲೂಷನ್ ಸಮಿಟ್’ ನ ಸ್ಥಾಪಕರಾದ ವಿ. ಆರ್. ಫಿರೋಸ್ ಬರೆದಿರುವ ಪ್ರಸ್ತುತ ಕೃತಿ ’ಗಿಫ್ಟೆಡ್’ ಭಾರತದ ವಿಭಿನ್ನ ಸಾಮರ್ಥ್ಯ ಉಳ್ಳವರ ಪಯಣವನ್ನು ಮನಮುಟ್ಟುವಂತೆ ವಿವರಿಸುತ್ತದೆ.
ಈ ಪಯಣದ ನಾಯಕ-ನಾಯಕಿಯರಾರೂ ಸಿಇಓಗಳಲ್ಲ ಅಥವಾ ಯಾವುದೇ ಪ್ರಭಾವಿ ಕ್ಲಬ್ಬುಗಳಲ್ಲಿ ಭಾಗಿಗಳಲ್ಲ. ಬದಲಿಗೆ ಅವರು ತಮ್ಮಷ್ಟಕ್ಕೆ ವಿಶೇಷರು, ಎಣೆಇಲ್ಲದವರು.
ಲೇಖಕರಾದ ಎ.ಆರ್. ಮಣಿಕಾಂತ್ ಮತ್ತು ಹ.ಚ ನಟೇಶ ಬಾಬು ಕನ್ನಡಕ್ಕೆ ಅನುವಾದಿಸಿರುವ ಈ ಕತೆಗಳು ಜೀವನ ಪ್ರೀತಿಗೆ ಉತ್ತಮ ಉದಾಹರಣೆ.
ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ...
READ MORE