‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಕೃತಿಯು ಅಗ್ನಿ ಶ್ರೀಧರ್ ಅವರ ಅನುಭವ ಕಥನವಾಗಿದೆ. ಈ ಕೃತಿಯು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ರೂಪುಗೊಂಡ ಅನುಭವ ಕಥನವಾಗಿದ್ದು, ಮಾಂತ್ರಿಕತೆ, ಮಾಟ-ಕೂಟಗಳಲ್ಲಿ, ಮನಸ್ಸಿನ ಆಳ ಮತ್ತು ವ್ಯಾಪ್ತಿಗಳನ್ನು ಅರಿಯಲು ಮನುಷ್ಯ ಬೆಳೆಸಿಕೊಂಡಿರುವ ಶಿಸ್ತು ಇವುಗಳೇ ಇಲ್ಲಿನ ಕಥಾವಸ್ತುಗಳಾಗಿವೆ. ವಿಜ್ಞಾನಮಾಂತ್ರಿಕತೆ ಎರಡರ ತಳಹದಿಯೂ ಒಂದೇ ಆಗಿದ್ದು ಅದು ವಸ್ತು ಮತ್ತು ಚೈತನ್ಯವಾಗಿದೆ ಹಾಗೂ ವಿಜ್ಞಾನ ವಸ್ತುವನ್ನು ಬಳಸಿ ಚೈತನ್ಯವನ್ನು ಅರಿಯುತ್ತದೆ; ಮಾಂತ್ರಿಕತೆಗೆ ಅದು ಜೀವಂತ ದ್ರವ್ಯವಾಗಿದೆ. ನಮ್ಮ ನಡುವೆಯೆ ಜೀವಿಸುತ್ತಾ ಸಾವಿನೊಡನೆ ಒಡನಾಟ ಬೆಳೆಸಿಕೊಂಡಿರುವವರ ವರ್ತನೆಯ ದಾಖಲೆಯೇ ’ ಆಧುನಿಕ ಮಾಂತ್ರಿಕರ ಜಾಡಿನಲ್ಲಿ ’ ಕೃತಿಯಾಗಿದೆ.
©2024 Book Brahma Private Limited.