ಹುಟ್ಟಿನಿಂದಲೇ ಕಿವುಡಾಗಿರುವ ಮಗುವಿಗೆ ಮುಂದೆ ಮಾತು ಬರಲಾರದೆಂಬುದು ಇದುವರೆಗಿನ ವೈದ್ಯಕೀಯ ಇತಿಹಾಸ. ಆದರೆ ಇದನ್ನು ಸವಾಲೆಂಬಂತೆ ತೆಗೆದುಕೊಂಡು ನಿರಂಜನ ಎಂಬ ಮಗುವಿಗೆ ಸರಾಗವಾಗಿ ಮಾತಾಡಲು ಕಲಿಸಿದ ರೋಚಕ ಕಥೆಯೊಂದು ಈ ಕೃತಿಯ ಉದ್ದಕ್ಕೂ ನಿರೂಪಣೆಗೊಂಡಿದೆ. ಮಗು ಕಿವುಡೆಂದು ತಿಳಿದ ತಕ್ಷಣ ತಡಮಾಡದೆ, ತಾಳ್ಮೆಯಿಂದ ವ್ಯವಹರಿಸಿ ಸರಿಯಾದ ಸಮಯದಲ್ಲಿ ಸರಿಯಾದ ಮಾತಿನ ಚಿಕಿತ್ಸೆ ನೀಡಿ ಆತನನ್ನು ಮಾತು ಕಲಿಯುವಂತೆ ಮಾಡಿದ ಸಂಭ್ರಮವನ್ನು ಇಲ್ಲಿ ಓದಿಯೇ ತಿಳಿಯಬೇಕು. ಇಲ್ಲಿನ ಹೆಚ್ಚಿನ ಪರಿಶ್ರಮ ತಾಯಿಯದೇ ಆಗಿದ್ದು ಮಾರ್ಗದರ್ಶನ ಮಾತ್ರ ಆತ ಕಲಿತ ಶಾಲೆಯ ಅಧ್ಯಾಪಕರದ್ದು ಹಾಗೂ ಕಿವುಡು ಮಕ್ಕಳಿಗಾಗಿ ಒಂದು ಶಾಲೆಯನ್ನೇ ಮೈಸೂರಿನಲ್ಲಿ ಪ್ರಾರಂಭಿಸಿದ ಪ್ರಾಥಃಸ್ಮರಣೀಯರೊಬ್ಬರದು. ಛಲವಿದ್ದರೆ ಹೀಗಿರಬೇಕೆಂದು ಇತರ ಕಿವುಡು-ಮೂಗ ಮಕ್ಕಳ ತಾಯಿ-ತಂದೆ-ಪೋಷಕರಿಗೆ ಒಂದು ಮಾದರಿಯಾಗಬಹುದಾದ ಕೃತಿಯಿದು.
©2025 Book Brahma Private Limited.