ಕಡಿದಾಳು ಕೆ.ಎಸ್. ರಾಮಪ್ಪಗೌಡ ಅವರು ಬೇಟೆ ಕುರಿತ ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ-ಮಲೆನಾಡಿನ ಶಿಕಾರಿಯ ನೆನಪುಗಳು. 1980ರ ಆಸುಪಾಸಿನ ಅವಧಿಯಲ್ಲಿಯ ಅನುಭವಗಳಿವು. ಬೇಟೆ ಆಡುವುದನ್ನು ಸರ್ಕಾರ ಇನ್ನೂ ಸಂಪೂರ್ಣ ನಿಷೇಧಿಸಿರಲಿಲ್ಲ. ಯಾವುದೇ ಸೌಕರ್ಯ-ಸೌಲಭ್ಯಗಳಿರದಿದ್ದರೂ ಅಂದಿನ ಜನರು ಅರಣ್ಯದಲ್ಲಿ ಹೇಗೆ ಬದುಕುತ್ತಿದ್ದರು ಎಂಬುದೇ ಕುತೂಹಲಕರ ಸಂಗತಿ. ಇಂತಹ ಸಂಗತಿಗಳ ವಿವರಣೆ ಇರುವ ಸಾಹಿತ್ಯ ಕಡಿಮೆ. ವಿಶೇಷವಾಗಿ, ಬೇಟೆಯನ್ನು ಹೇಗೆ ಆಡುತ್ತಿದ್ದರು. ಅದು ಹೇಗೆ ಅವರ ಬದುಕಿನ ಪ್ರಮುಖ ಭಾಗವಾಯಿತು. ಬೇಟೆ ಅವರಿಗೆ ಅನಿವಾರ್ಯವಿತ್ತೆ. ಅರಣ್ಯ ಪ್ರದೇಶದ ಕುತೂಹಲ ಸಂಗತಿಗಳು, ಪ್ರಾದೇಶಿಕತೆ, ಭೂಗೋಲದ ವೈಶಿಷ್ಟ್ಯ ಎಲ್ಲವನ್ನೂ ಅಧ್ಯಯನ ಮಾಡಲು ಇಂತಹ ಕೃತಿಗಳು ಆಕರ ಗ್ರಂಥಗಳಾಗುತ್ತವೆ.
©2024 Book Brahma Private Limited.