ಕನ್ನಡದ ಪ್ರಮುಖ ಕಾದಂಬರಿಕಾರ-ಲೇಖಕ ಸತ್ಯಕಾಮ. ತಂತ್ರಲೋಕವನ್ನು ಕನ್ನಡದಲ್ಲಿ ಕಟ್ಟಿಕೊಟ್ಟ ವಿಭಿನ್ನ-ವಿಶಿಷ್ಟ ಬರಹಗಾರ. ತಾಂತ್ರಿಕ ಸಿದ್ಧಿಯ ಬೆನ್ನು ಹತ್ತಿ ದೇಶದಾದ್ಯಂತ ಸುತ್ತಾಡಿದ ಸತ್ಯಕಾಮರು ಕಲ್ಲಳ್ಳಿಯಲ್ಲಿ ನೆಲೆನಿಂತು ಕೃಷಿಕರಾದವರು. ತಾತ್ವಿಕ ಜಿಜ್ಞಾಸೆ-ಸಾಧಕನ ಹಠಗಳೆರಡರಲ್ಲೂ ಅವರಂತಹವರು ವಿರಳ. ಸತ್ಯಕಾಮರ ಕೊನೆಯ ದಿನಗಳಲ್ಲಿ ಅವರ ಜೊತೆಗಿದ್ದವರು ವೀಣಾ ಬನ್ನಂಜೆ. ವೀಣಾ ಅವರು ಸತ್ಯಕಾಮರ ಒಡನಾಟದ ಸಂಗತಿಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...
READ MORE