ಅಪ್ಪನನ್ನು ಅಣ್ಣಯ್ಯ ಎಂದು ಕರೆಯುವ ಲೇಖಕಿ ತನ್ನ ಹಾಗೂ ಅಣ್ಣಯ್ಯನ ನಡುವೆ ನಡೆದ ಪ್ರತಿ ಪ್ರಸಂಗವನ್ನು ಸುಂದರವಾಗಿ, ಚಿಕ್ಕ ಚಿಕ್ಕ ಘಟನೆಗಳನ್ನು ನೆನಪಿಸಿಕೊಂಡು ಅವುಗಳನ್ನು ಕೃತಿಯಲ್ಲಿ ನೀಡಿದ್ದಾರೆ. ತನ್ನ ಜೀವನ ಅಲ್ಲದೇ ತನ್ನ ಅಣ್ಣಯ್ಯನ ಬದುಕಿನಲ್ಲೂ ನಡೆದ ಕೆಲ ಘಟನೆಗಳು ಅಣ್ಣಯ್ಯನನ್ನು ಹೇಗೆ ಶಿಸ್ತಿನ ಸಿಪಾಯಿಯಾಗಿಸಿದವು ಎಂಬದರ ಕುರಿತು ಲೇಖಕಿಯು ಇಲ್ಲಿ ವಿವರಿಸಿದ್ದಾರೆ. ಬರೀ ಗಂಭೀರ ಸ್ವರೂಪದ ಅಣ್ಣಯ್ಯನಲ್ಲದೇ ಪ್ರೀತಿ, ಮಮತೆ, ಅಕ್ಕರೆ ತೋರುವ ಅಣ್ಣಯ್ಯನ ಪರಿಯನ್ನು ಮನ ಮುಟ್ಟುವಂತೆ ನಿರೂಪಿಸಿದ್ದಾರೆ.
ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...
READ MORE