ನಾನು ದೇವರೂ ಅಲ್ಲ, ದೇವಮಾನವನೂ ಅಲ್ಲ! ಇದು ಬೆಲಗೂರಿನ ಬಿಂದು ಮಾಧವಶರ್ಮಾ ಅವರ ರೋಚಕ ಬದುಕಿನ ನೈಜಘಟನೆಗಳು ಇಲ್ಲಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ. ಮೂವತ್ತು ಅಧ್ಯಾಯಗಳಲ್ಲಿ ಮೂಡಿಬಂದಿರುವ ಘಟನಾವಳಿಗಳು ಶರ್ಮಾ ಅವರ ನಿತ್ಯ ಬದುಕಿಗೆ ಹಿಡಿದ ಕನ್ನಡಿಯಂತಿವೆ. ಈ ಕೃತಿಯಲ್ಲಿ ಬಿಂದು ಮಾಧವಶರ್ಮಾ ಅವರ ಬಾಲ್ಯ, ಶರಣತ್ವ ಮೈಗೂಡಿಸಿಕೊಂಡ ಬಗೆ ಕಾರಣ ಹೀಗೆ ಅತೀತ ಲೋಕಗಳ ಅನುಭವಿಕ ಕಥನವನ್ನು ವಿವರಿಸಲಾಗಿದೆ.
ಡಾ. ಲೋಕೇಶ್ ಅಗಸನಕಟ್ಟೆ ಅವರು ಕವಿ-ಕತೆಗಾರರು. 1958ರ ಆಗಸ್ಟ್ 7ರಂದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಜನಿಸಿದರು. ಅಗಸನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಆನಗೋಡಿನ ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಜಿ.ಚನ್ನಪ್ಪ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಪದವಿ ಮೈಸೂರಿನ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ, ಪಿಹೆಚ್‍ಡಿ ಸಹ ಪಡೆದಿದ್ದಾರೆ. 1986 ರಿಂದ ಮುಂಜಾನೆ ಪತ್ರಿಕೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಅಗಸನಕಟ್ಟೆ, 1984 ರಿಂದ 2017ರವರೆಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸಾಹಿತ್ಯಿಕ ಬರವಣಿಗೆ, ಅಂಕಣ ಬರಹ, ...
READ MORE