ಡಾ.ಟಿ.ವಿ. ಚಂದ್ರಶೇಖರ್ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂಬುದು ಜೀವನಾನುಭವದ ಚಿಂತನೆಗಳನ್ನುಒಳಗೊಂಡ ಕೃತಿ. ಬದುಕು ಮತ್ತು ಬದುಕಿನಾಚೆಗಿನ ಸತ್ವಯುತ ಸತ್ಯಗಳನ್ನು ಬಿಚ್ಚಿಡುವ ಸೃಜನಶೀಲ ಕೃತಿ ಇದು. ವಿಮರ್ಶಕ ಪ್ರೊ.ಸುರೇಶ ಮುದ್ದಾರ ಹೇಳುವಂತೆ ‘ವೃತ್ತಿಯಲ್ಲಿ ವೈದ್ಯರಾಗಿದ್ದು, ವೈದ್ಯಕೀಯ ಬದುಕನ್ನು ಆಳವಾಗಿ ಗ್ರಹಿಸುವುದು ಸುಲಭ.ಆದರೆ ಇಡೀ ಮಾನವನ ಬದುಕಿನ ಕುರಿತು ಬರೆಯುವುದು ಸುಲಭವಲ್ಲ. ಅಂತಹ ವಿಭಿನ್ನ ಕೆಲಸವನ್ನು ಡಾ.ಟಿ.ವಿ. ಚಂದ್ರಶೇಖರ್ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಶ್ರೀಧರ ಬನವಾಸಿ ಅವರು ಕೃತಿಗೆ ಬೆನ್ನುಡಿ ಬರೆದಿದ್ದು, ಈ ಕೃತಿಯು ಪರಿಪೂರ್ಣತೆಯಿಂದ ಕೂಡಿದ ಜೀವನ ವಿಜ್ಞಾನ, ಬದುಕಿನ ಮಹತ್ವದ ಅರಿವು ಮೂಡಿಸುವ ದೀವಿಟಿಗೆಯಾಗಿದೆ. ವೃತ್ತಿಯಲ್ಲಿ ವೈದ್ಯರಾದರೂ, ಚಂದ್ರಶೇಖರ ಅವರೊಳಗೊಬ್ಬ ಜೀವನದ ಸತ್ವಗಳನ್ನು ಹುಡುಕುವ ಸಂಶೋಧಕನಿದ್ದಾನೆ’ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.
‘ಡಾ.ಟಿ.ವಿ. ಚಂದ್ರಶೇಖರ್ ಅವರು ಸದ್ಯ, ನಿವೃತ್ತರಾದರೂ ಅವರನ್ನು ಬರವಣಿಗೆಯ ಲೋಕಕ್ಕೆ ಕರೆತಂದದ್ದು ಅದೇ ಅಕ್ಷರ ಪ್ರೀತಿ , ಕೃತಿಯಲ್ಲಿರುವ ಮುತ್ತಿನ ಸಾಲುಗಳು ನಿಜವಾಗಿಯೂ ಬೋಧನೆಯಲ್ಲ. ಬದಲಾಗಿ, ಹೊತ್ತಗೆಯ ಹೆಸರೇ ಹೇಳುವಂತೆ ಇವು ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂದು ಹಿರಿಯ ಪತ್ರಕರ್ತ ಚೆನ್ನಮಲ್ಲಿಕಾರ್ಜುನ ಹದಡಿ ಹೇಳಿದ್ದಾರೆ.
©2025 Book Brahma Private Limited.