ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣಾಚಾರ್ಯರನ್ನು ಸೋಲಿಸುವುದು ಅಸಾಧ್ಯವೆನಿಸಿದಾಗ, ಒಂದು ತಂತ್ರವನ್ನು ಹೂಡುತ್ತಾನೆ ಕೃಷ್ಣ ಭೀಮನು ಅಶ್ವತ್ಥಾಮ ಎಂಬ ಆನೆಯನ್ನು ಕೊಂದು 'ನಾನು ಅತ್ತಾದನನ್ನು ಕೊಂದ ಎಂದು ಜೋರಾಗಿ ಕೂಗಿಕೊಂಡಾಗ, ಆ ಮಾತು ದ್ರೋಣಾಚಾರ್ಯರಿಗೆ ಕೇಳಿಸುತ್ತದೆ. ಆಗ ದ್ರೋಣಾಚಾರ್ಯರು ಸುಳ್ಳನ್ನೇ ಆಡಿದ ಯುಧಿಷ್ಟಿರನ ಕಡೆಗೆ ನೋಡಿದಾಗ, ಯುಧಿಷ್ಠಿರನು 'ಅಶ್ವತ್ಥಾಮೋ ಹತಃ ನರೋದ ಎಂಜವ ಎನ್ನುತ್ತಾನೆ. 'ಅಶ್ವತಾದುವು ಸತ್ತಿದ್ದಾನೆ. ಮನುಷ್ಯನೋ ಆಥದ ಆನೆಯೋ ಎನ್ನುವರು. ತಿಳಿಯದು' ಎಂಬ ಅರ್ಥದ ಮಾತಾಡುತ್ತಾನೆ. ಯುಧಿಷ್ಠಿರನು 'ಮನುಷ್ಯನೋ ಇಲ್ಲ ಆನೆಯೋ ಎನ್ನುವುದು ತಿಳಿಯದು' ಎನ್ನುವಾಗ ಕೃಷ್ಣನು ತನ್ನ ಪಾಂಚಜನ್ಯವನ್ನು, ಎಲ್ಲ ಪಾಂಡವರು ತಮ್ಮ ತಮ್ಮ ಶಂಖಗಳನ್ನು, ಸೈನಿಕರು ತಮ್ಮ ನಗಾರಿ, ತಮಟೆ, ಮದ್ದಳೆ, ಡಕ್ಕೆ, ಕಳೆ ಮುಂತಾದ ರಣವಾದಗಳನ್ನು ಮೊಳಗಿಸುತ್ತಾರೆ. ಹಾಗಾಗಿ ಕುಂಜರೋಷ್' ಎನ್ನುವ ತುವ ದ್ರೋಣರಿಗೆ ಕೇಳಿಸುವುದಿಲ್ಲ. ಸತ್ಯವಂತೆ ಯುಧಿಷ್ಠಿರನು ಹೇಳಿದ ಮೇಲೆ ತಮ್ಮ ಮಗ ಸತ್ತಿರಲೇಬೇಕು ಎಂಬ ತೀರ್ಮಾನಕ್ಕೆ ಬರುವ ದ್ರೋಣಾಚಾರ್ಯರು ರಹದಿಂದ ಇಳಿದು ಅರಗಳನ್ನು ತ್ಯಜಿಸಿ ಯೋಗಸಮಾಧಿಯಲ್ಲಿ ಕುಳಿತು ಪ್ರಾಣವನ್ನು ಬಿಡುತ್ತಾರೆ, ಬೇದವಿಲ್ಲದ ಲೋಕಾಚಾರ್ಯರ ಶಿರವನ್ನು ಪಾಂಡದ ಸೇನೆಯ ಮಹಾದಂಡನಾಯಕನಾದ ದೃಷ್ಟದ್ಯುಮ್ನನು ತರಿದು ಹಾಕುತ್ತಾರೆ. ಎಂತಹ ಸಂವಹನ ಕೊರತೆ ದ್ರೋಣಾಚಾರ್ಯರು ಒಂದು ಶಬ್ದವನ್ನು ಸರಿಯಾಗಿ ಆಲಿಸದ ಕಾರಣ ತಮ್ಮ ಜೀವದನ್ನೇ ಕಳೆದುಕೊಂಡರು, ನಿಖರ ಸಂವಹನ, ನಮ್ಮ ಅಸ್ತಿತ್ವಕ್ಕೆ ತೀರಾ ಆಗತ್ಯ ಎನ್ನುವುದನ್ನು ನಾವು ಮರೆಯಬಾರದು ಎಂದು ನಾ ಸೋಮೆಶ್ವರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.