ಉತ್ತರ ಧ್ರವದಿಂ ದಕ್ಷಿಣ ಧ್ರುವಕೂ ಇದು ಲೇಖಕಿಯ ಸಾಹಿತ್ಯ ಪಯಣದ ಕುರಿತಾದ ಪುಸ್ತಕ. ತಾವು ಭೇಟಿ ಮಾಡಿದ ಸ್ಥಳಗಳ ಬಗ್ಗೆ, ಅಲ್ಲಿನ ರೀತಿ ನೀತಿ, ಆಹಾರ ಪದ್ಧತಿ, ಅಲ್ಲಿಯ ಜನರ ಒಡನಾಟ ಇವುಗಳೆಲ್ಲವೂ ಇವರ ಈ ಕೃತಿಯಲ್ಲಿ ಬಿಂಬಿತವಾಗಿದೆ. ಅದನ್ನು ಹದಿಮೂರು ಭಾಗಗಳಲ್ಲಿ ಬರೆದಿರುವ ಲೇಖಕಿಯ ಅನುಭವ ಓದುವುದೇ ಒಂದು ಚಂದ. ಎ.ಐ. ಪಿ.ಸಿ ಈ ಸಂಸ್ಥೆಯ ಸದಸ್ಯೆ ಮಾತ್ರವಲ್ಲದೇ, ಬೆಂಗಳೂರು ಮಹಾನಗರಿಯ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸದಸ್ಯೆಯಾಗಿರುವ ಇವರು ಎಲ್ಲಾ ಸಂಸ್ಥೆಗಳಲ್ಲೂ ಸಕ್ರೀಯವಾಗಿ ಭಾಗವಹಿಸುತ್ತಿರುವುದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಪ್ರಯಾಣದುದ್ದಕ್ಕೂ ತಾವು ಕಲಿತದ್ದು ಬೇಕಾದಷ್ಟಿದ್ದರೂ, 'ಕಲಿತದ್ದು ಅಂಗೈ ಅಗಲ, ಕಲಿಯಬೇಕಾದ್ದು ಕಡಲಗಲ' ಎಂದು ವಿನಮ್ರವಾಗಿ ಹೇಳುವ ಬೆಳವಾಡಿಯವರು ತಾವು ಸಂದರ್ಶಿಸಿದ ಸ್ಥಳಗಳ ಚಿತ್ರಗಳನ್ನು ಈ ಪುಸ್ತಕದಲ್ಲಿ ನಮೂದಿಸಿದ್ದಾರೆ.
©2024 Book Brahma Private Limited.