ಪುಟ್ಟಪರ್ತಿಯಲ್ಲಿ ನೆಲೆಸಿದ್ದ ಸಾಯಿ ಬಾಬಾ ಅವರ ನಿವಾಸದಲ್ಲಿ ನಡೆದಿರಬಹುದೆನ್ನಲಾದ ಕೊಲೆಗಳ ಕುರಿತು ಈ ಪುಸ್ತಕವನ್ನು ಬರೆಯಲಾಗಿದೆ. ಸಾಯಿ ಬಾಬಾ ಅವರಿಗಿರುವ ಅಪಾರ ಭಕ್ತ ಸಮೂಹವನ್ನು ಲೆಕ್ಕಿಸದೇ, ತಮ್ಮ ವಿಚಾರಗಳನ್ನು ಹಾಗೂ ತಾವು ಕಂಡುಕೊಂಡಂತಹ ವಾಸ್ತವಾಂಶಗಳನ್ನು ಅತ್ಯಂತ ರೋಚಕತೆಯಿಂದ ನಿರೂಪಿಸಿದ್ದಾರೆ. ಸಾಯಿ ಬಾಬಾ ಅವರ ಜೀವನದ ಕತ್ತಲ ಪುಟಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಲೇಖಕರಾದ ರವಿ ಬೆಳಗೆರೆ ಅವರು ಈ ಪುಸ್ತಕದಲ್ಲಿ ತಮ್ಮಲ್ಲಿರುವ ಪತ್ರಕರ್ತನನ್ನು ನಿಚ್ಛಳವಾಗಿ ತೆರದಿಟ್ಟಿದ್ದಾರೆ. ಸಾಯಿ ಬಾಬಾ ಅವರ ಸಾಮಾಜಿಕ ಕಾರ್ಯಗಳ ಕುರಿತು ಅವರನ್ನು ಹೊಗಳುತ್ತಲೇ, ಪುಟ್ಟಪರ್ತಿಯಲ್ಲಿ ನಡೆಯುವ ಕರಾಳ ಕೃತ್ಯಗಳ ಕುರಿತು ಸವಿವರವಾಗಿ ಬರೆಯುತ್ತಾ ಹೋಗುತ್ತಾರೆ ಲೇಖಕರು. ತುಂಬಾ ವಿರೋಧವನ್ನು ಕಂಡರೂ ಈ ಪುಸ್ತಕವು ಅಪಾರ ಓದುಗರನ್ನು ಆಕರ್ಷಿಸಿದೆ. ಪುಟ್ಟಪರ್ತಿಯಲ್ಲಿ ನಡೆದಂತಹ ಅಕ್ರಮಗಳನ್ನು ಮುಚ್ಚಿಹಾಕಲು ದೇಶದ ಪ್ರಧಾನಿಯಿಂದ ಹಿಡಿದು ಅಲ್ಲಿರುವ ಒಬ್ಬ ಪೊಲೀಸ್ ಅಧಿಕಾರಿಗಳವರೆಗೂ ಯಾವ ರೀತಿ ಪ್ರಯತ್ನಗಳು ನಡೆದಿದ್ದವು ಎಂಬುದರ ಕುರಿತು ಈ ಪುಸ್ತಕವು ವಿವರಿಸುತ್ತದೆ. ಅಪ್ಪಟ ಬೆಳಗೆರೆ ಶೈಲಿಯಲ್ಲಿರುವ ಈ ಪುಸ್ತಕ ಓದುಗರಿಗೆ ರೋಚಕತೆಯನ್ನು ಹುಟ್ಟಿಸುವುದರಲ್ಲಿ ಸಂಶಯವಿಲ್ಲ.
©2024 Book Brahma Private Limited.