'ತೆರೆದ ಮನಸ್ಸಿನ ಪುಟಗಳು' 25 ಕಥೆಗಳುಳ್ಳ ಕಥಾ ಸಂಕಲನ. ಇದರಲ್ಲಿನ ಕಥೆಗಳಲ್ಲಿ ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತ ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು, ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ, ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.
©2025 Book Brahma Private Limited.