’ದನೀನ ಆಸ್ಪತ್ರೆ’ ಕೃತಿ ಸಹಜೀವಿಗಳ ಜೊತೆ ಮನುಷ್ಯನ ನಡವಳಿಕೆ ಯಾವ ರೀತಿ ಇರಬೇಕೆಂದು ಹೇಳುತ್ತದೆ. ಪ್ರಾಣಿಗಳನ್ನು ಕೇವಲ ದುಡಿಮೆಯ ಯಂತ್ರಗಳಂತೆ ಬಳಸಿಕೊಳ್ಳಬಾರದು. ಪಶುವೈದ್ಯರ ಬಗ್ಗೆ ಸಮಾಜಲ್ಲಿರುವ ಕೀಳು ಭಾವನೆಯನ್ನು ಲೇಖಕರು ಕೃತಿಯಲ್ಲಿ ಪ್ರಶ್ನಿಸಿದ್ದಾರೆ.
ಭೂಮಿಯ ಮೇಲೆ ಬದುಕಿನ ಭಾಗಗಳಂತೆ ತಾವು ಪಳಗಿಸಿಕೊಂಡು ತಮ್ಮ ಸಹಜೀವಿಗಳಾಗಿಸಿರುವ ದನ, ಕುರಿ, ಬೆಕ್ಕು, ನಾಯಿ ಇತ್ಯಾದಿ ಜೀವಜಂಗಮ ಪಡೆಯ ಜೊತೆ ಕುಟುಂಬದ ಪ್ರಜ್ಞೆಯಲ್ಲಿ ಜನರು ಬಾಳು ಕಟ್ಟಿಕೊಂಡಿದ್ದಾರೆ.ಇಂಥ ಜೀವಪಡೆಗಳ, ಅಂದರೆ ಸಾಕುಪ್ರಾಣಿಗಳ ಅನಾರೋಗ್ಯದ ಕಾಳಜಿ ವಹಿಸುವ ವೈದ್ಯರ ಬಗ್ಗೆ ದೊಡ್ಡ ನಿಲುವೇ ಇದೆ. ಪಶುವೈದ್ಯರ ಸೇವೆಯೆನ್ನುವುದು ಅಮೂಲ್ಯವಾದದ್ದು,ವೃತ್ತಿಯಿಂದ ಸ್ಪತಃ ಪಶುವೈದ್ಯರಾಗಿರುವ ಲೇಖಕರು ತಮ್ಮ ವೃತ್ತಿಯಲ್ಲಿನ ಅನುಭವವನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.
©2025 Book Brahma Private Limited.