ಮೈಸೂರು ನಗರದಲ್ಲಿ ಸಾಂಸ್ಕೃತಿಕ ದ್ವೀಪವಾಗಿ ಉಳಿದು ಬಂದಿರುವ ಕುಕ್ಕರಹಳ್ಳಿ ಕುರಿತಾದ ಒಂದು ದೀರ್ಘವಾದ ಕಥಾನಕವಾಗಿದೆ ಕೃತಿ. ಲೇಖಕರು ತಾವು ಕಂಡ ಅನುಭವವನ್ನು ಇಲ್ಲಿ ವಿವರಿಸಿದ್ದಾರೆ. ದಲಿತ ಗ್ರಾಮ ಜೀವನ ಚಿತ್ತ ಇದರ ಉದ್ದೇಶ. ದಲಿತ ಗ್ರಾಮ ಸಂದರ್ಭದಲ್ಲಿ ಸಮಸ್ಯೆ ಮತ್ತು ಸಂಘರ್ಷದ ಸ್ವರೂಪ ಇವುಗಳ ಕುರಿತು ವಿವರಗಳನ್ನು ನೀಡಿದ್ದಾರೆ. 150 ಪುಟಗಳಲ್ಲಿ ಇಪ್ಪತ್ತು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಪುಸ್ತಕ ಕುಕ್ಕರಹಳ್ಳಿಯ ಜೀವನ ಚರಿತ್ರೆಯಾಗುವಂತೆಯೇ ಲೇಖಕರ ಆತ್ಮಕಥನದ ಒಂದು ಭಾಗವಾಗಿದೆ. ಸಣ್ಣಕಥೆಗಳ ಎಳೆಗಳಿವೆ, ಭಾಗವಗೀತೆಯ ಅಂಶಗಳಿವೆ, ಪ್ರಬಂಧದ ಧಾಟಿಗಳು ಕೃತಿಯಲ್ಲಿ ಕಂಡು ಬರುತ್ತದೆ.
©2024 Book Brahma Private Limited.