‘ಪರಿಸರ ಪರ್ಯಟನ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪರಿಸರ ಹಾಗೂ ಪ್ರಯಾಣದ ಕುರಿತ ಬರಹಗಳ ಸಂಕಲನವಾಗಿದೆ. ಭಾಗ-1 ಹಾಗೂ ಭಾಗ-2 ಅಧ್ಯಾಯವನ್ನು ಒಳಗೊಂಡಿದ್ದು, ಭಾಗ-1ರಲ್ಲಿ ವಿಚಾರ ಮಂಡನೆ: ಕೃಷ್ಣಾನಂದ ಕಾಮತ ಪ್ರತಿಷ್ಠಾನ: ಒಂದು ಕಿರು ಪರಿಚಯ, ಪ್ರಾಸ್ತಾವಿಕವಾಗಿ (ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್), ಕವನ-ನಮನ: ಕೃಷ್ಣಾನಂದರಿಗೆ ಕವನಾಂಜಲಿ, ಆತ್ಮೀಯ ಸ್ಮರಣೆ (ವಾಸುದೇವ ಶಾನಭಾಗ), ಕೃಷ್ಣಾನಂದ ಕಾಮತರನ್ನು ಕುರಿತು (ಡಾ. ವಿ.ಎಸ್. ಸೋಂದೆ), ಸಂತನಂತೆ ಬಾಳಿದ ಮಹಾಸಂಸಾರಿಯ ಕುರಿತು (ಹರಿಪ್ರಕಾಶ ಕೋಣೆಮನೆ), ಅಭಿವೃದ್ಧಿ ಮತ್ತು ಪರಿಸರ (ಗಣೇಶಭಟ್, ಉಪ್ಪೋಣಿ), ಪಶ್ಚಿಮ ಘಟ್ಟದಲ್ಲಿ ಪರಿಸರ ಅರಿವಿನ ಕಾಲಘಟ್ಟ (ಶಿವಾನಂದ), ಕಳವೆ ಪರಿಸರ ರಕ್ಷಣೆಯ ಹೋರಾಟ: ಕೆಲವು ನೆನಪುಗಳು (ಲಕ್ಷ್ಮೀಗೌಡ ಆಳಗೋಡು), ಕೃಷ್ಣಾನಂದ ಕಾಮತರ ಪ್ರವಾಸ ಸಾಹಿತ್ಯದಲ್ಲಿ ಪರಿಸರ (ನಾಗರಾಜ ಹೆಗಡೆ ಅಪಗಾಲ), ಜನಪ್ರಿಯ ಪ್ರವಾಸಿ ತಾಣವಾಗಬಲ್ಲ ಉತ್ತರ ಕನ್ನಡ (ಡಾ. ಟಿ.ಎಸ್. ಹಳೆಮನೆ), ಒಬ್ಬ ಅಪ್ಪಟ ಮನುಷ್ಯನ ಜೀವನ ಪ್ರೀತಿ (ಹರಿಪ್ರಕಾಶ ಕೋಣೆಮನೆ), ಕಾಮತ ಕುಟೀರ (ಡಾ. ಶ್ರೀಧರ ಬಳಗಾರ), ಚಿಗರಿಗಂಗಳ ಚೆಲುವಿ, ಪಶ್ಚಿಮ ಘಟ್ಟಗಳು ಆಗ-ಈಗ, ಪರಿಸರ ಮತ್ತು ನಾವು, ಅಳಿವು – ಉಳಿವಿನ ಪ್ರಶ್ನೆ, ಬರಲಿವೆ ಪರಿತಾಪದ ದಿನಗಳು!, ಲೇಖಕರ ಪರಿಚಯ ಸ್ವಗತ ಇವೆಲ್ಲಾವುಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ತಮ್ಮ ವಿಶಿಷ್ಟ ಶೈಲಿಯ, ಸರಳ, ವಿನೋದಮಯ ಬರವಣಿಗೆಯಿಂದಾಗಿ ಕನ್ನಡ ಸಾಹಿತ್ಯದಲ್ಲಿ ಪ್ರತ್ಯೇಕ ಸ್ಥಾನವನ್ನು ಗಿಟ್ಟಿಸಿಕೊಂಡ ಡಾ. ಕೃಷ್ಣಾನಂದ ಕಾಮತರ (1934 2002) ಪ್ರತಿಭೆ ಬಹುಮುಖವಾದದ್ದು. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಅವರು ಕಲಾಪ್ರಪಂಚದಲ್ಲಿಯೂ, ಸಾಹಿತ್ಯದಲ್ಲೂ, ಹೆಸರು ಮಾಡಿದರು. ಛಾಯಾಚಿತ್ರ ಕ್ಷೇತ್ರದಲ್ಲಿಯೂ ನಿರಂತರವಾಗಿ ನಡೆಸಿದ ಪರಿಸರ ನಾಶಕ್ಕೆ ನಮ್ಮ ಸರಕಾರ ಹಾಗೂ ಜನತೆ ಎಚ್ಚೆತ್ತುಕೊಳ್ಳುವ ಮೂರು ದಶಕಗಳ ಹಿಂದೆಯೇ ಅವರು ಪ್ರಸಿದ್ಧ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಗಳ (College of Envi ronmental Sciences) ಸಿರೆಕ್ಯೂಸ್ ಮಹಾವಿದ್ಯಾಲಯದಿಂದ ಅರಣ್ಯರಕ್ಷಣೆಯ ಕೀಟಶಾಸ್ತ್ರ ವಿಜ್ಞಾನದಲ್ಲಿ ಡಾಕ್ಟರೇಟ್ ಗಳಿಸಿದ್ದರು. (1965) ಆಗ ಅವರು ಗಳಿಸಿದ ಪರಿಣತಿ, ಸಸ್ಯಪೋಷಣೆ, ಕೀಟ ನಿಯಂತ್ರಣ, ಹಾಗೂ ಪರಿಸರ ರಕ್ಷಣೆಯ ಕ್ಷೇತ್ರಗಳಿಗೆ ಸರಿ ಹೊಂದುವ ಯಾವ ಚಿಕ್ಕ ನೌಕರಿಯೂ ಭಾರತದಲ್ಲಿ ಸಿಗಲಿಲ್ಲ. ಆದರೆ ಇದರಿಂದ ಅವರು ವಿಚಲಿತರಾಗಲಿಲ್ಲ. ಅದಾಗಲೇ ಪರಿಸರ ನಾಶಕ್ಕೆ ಎಚ್ಚೆತ್ತು ತನ್ನ ರಾಷ್ಟ್ರೀಯ ಯೋಜನೆಯನ್ನು ರೂಪಿಸಿಕೊಂಡ, ಹೊಸ ಸಾಹಸಕ್ಕೆ, ಪ್ರತಿಭೆಗೆ, ಎಂದಿಗೂ ಮುಕ್ತ ಅವಕಾಶ ಕಲ್ಪಿಸುವ ಅಮೇರಿಕಗೂ ತಿರುಗಿ ಹೋಗಲಿಲ್ಲ. ತಾನು ಕಲಿತ ವಿಶ್ವವಿದ್ಯಾಲಯದಲ್ಲೇ ನೌಕರಿ ಮಾಡೆಂದು ಅಮೇರಿಕದ ಪ್ರಾಧ್ಯಾಪಕರು ಸೂಚಿಸಿದಾಗಲೂ, ತನ್ನ ವಿದ್ಯೆ ತನ್ನವರಿಗಾಗಿ ಮೀಸಲಿರಬೇಕೆಂದು ತನ್ನ ಆಶಯ! ಎಂದು ಹೇಳಿದ್ದರು. ಹವ್ಯಾಸವಾಗಿ ಬೆಳೆಸಿಕೊಂಡ ಛಾಯಾಚಿತ್ರಗ್ರಹಣ ಮತ್ತು ವಿಜ್ಞಾನದ ಹಿನ್ನೆಲೆಯ, ತರಬೇತಿಗೆ ಸರಿಹೊಂದುವಂಥ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೋರೇಟರಿ (Scientific Photo Lab) ಒಂದನ್ನು ಮಲ್ಲೇಶ್ವರಂನಲ್ಲಿ 1971ರಲ್ಲಿ ತೆರೆದರು. ಎಣೆಯಿಲ್ಲದ ಪರಿಶ್ರಮದಿಂದ ಏಕಲವ್ಯನ ಪರಿಣತಿಯನ್ನು ಸಾಧಿಸಿದರು ಎಂಬ ಬಗೆಗಿನ ವಿವರಣೆಗಳನ್ನು ಒಳಗೊಂಡಿದೆ.
©2024 Book Brahma Private Limited.