ಸಂತೋಷ್ ತಮ್ಮಯ್ಯ ಅವರ ’ಸಮರ ಭೈರವಿ’ ಕೃತಿಯು ಸೈನಿಕರ ಸಾಹಸ ಗಾಥೆಯನ್ನು ಒಳಗೊಂಡಿರುವ ಸಾಹಸ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಬಿ.ಎಲ್ ಸಂತೋಷ್ ಅವರು, ‘ಸಮರ ಭೈರವಿ ಕೃತಿಯಲ್ಲಿ ಒಬ್ಬೊಬ್ಬ ಸೈನಿಕನೂ ಮಾತಾಡುತ್ತಾನೆ. ಅವನ ಅನುಭವವನ್ನೂ ಹೇಳಿಕೊಳ್ಳುತ್ತಾನೆ. ಸಿಪಾಯಿಯಿಂದ ಹಿಡಿದು ಸೈನ್ಯದ ಅಧಿಕಾರಿಗಳ ಸಾಹಸ ಅನುಭವದ ಸಾರವನ್ನೂ ಹೊಂದಿರುವ ಮೂವತ್ತು ಲೇಖನಗಳಿದ್ದು, ಒಂದೊಂದು ಲೇಖನವೂ ಅನುಭವ ಸಾರದ ಪಾಠ ಎಂದೇ ಕರೆಯಬಹುದಾಗಿದೆ. ಇಲ್ಲಿ ಬರುವ ಒಬ್ಬೊಬ್ಬ ಸೈನಿಕನು ಕೇವಲ ಸಂಬಳಕ್ಕಾಗಿ ಅಥವಾ ದಿನಗೂಲಿಗಾಗಿ ಸೈನ್ಯಕ್ಕೆ ಸೇರಿದ್ದರೆಂದು ಕಂಡುಬರಲಿಲ್ಲ. ಇವರಾರೂ ತಮ್ಮ ಜಾತಿಯನ್ನು ಹೇಳಿಕೊಂಡಿಲ್ಲ ಅಥವಾ ನಿವೃತ್ತಿಯ ನಂತರ ತಮ್ಮ ಜಾತಿಗಾಗಿ ಬದುಕಿಲ್ಲ ಎಂಬುದು ಖಾತರಿಯಾಗುತ್ತದೆ. ಪ್ರತೀ ಭಾರತೀಯನು ಸೈನ್ಯಕ್ಕೆ ಸೇರಲೇಬೇಕು ಆನಂತರವಷ್ಟೇ ಉದ್ಯೋಗ ಎನ್ನುವಂತಹ ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಅಧೀನದಲ್ಲಿದ್ದ ಸೈನಿಕರ ಮತ್ತು ಜಾಗತಿಕ ಯುದ್ಧದಲ್ಲಿ ಭಾಗವಹಿಸಿದ್ದ ಸಿಪಾಯಿಗಳಿಂದ ಹಿಡಿದು ಇಂದಿನ ಕಾರ್ಗಿಲ್, ‘ಉರಿ’ ವರೆಗಿನ ಹಾಗೂ ಏರ್ ಸ್ಟ್ರೈಕ್ ಸಮರ ಸಾಹಸವನ್ನು ಮೆರೆದ ಅಭಿನಂದನ್ ವರೆಗೂ ಯಾವುದೇ ವರ್ಣನೆ, ವಿಜೃಂಭಣೆ ಇಲ್ಲದೇ ಸರಳ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಈ ಕೃತಿ ಮೂಡಿಬಂದಿದೆ. ಸೈನಿಕ ತನ್ನ ಸಂಬಂಧದ ಬಂಧವನ್ನು ಬಿಡಿಸಿಕೊಂಡ ಹಾಗೂ ಉಳಿಸಿಕೊಳ್ಳುವ ಬಗೆ, ದೇಶವೇ ನನ್ನ ಆಸ್ತಿ ಅದೇ ನಮಗೆ ಎಲ್ಲವೆನ್ನುವ ಹೊಸ ಸಂಬಂಧ, ಸೈನ್ಯದೊಡನಾಡಿಗಳ ಹಿತವಾದ ಅನುಬಂಧದ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಬರವಣಿಗೆಯಲ್ಲಿ ಸೈನಿಕರ ಭಾವನೆಗಳನ್ನು ಚಿತ್ರಿಸುತ್ತಾ ಹೋಗುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ.
©2024 Book Brahma Private Limited.