ಇದು ಕನ್ನಡದ ಕಡಲತೀರದಿಂದ ಇಂಗ್ಲೆಂಡಿನ ಕಡಲತೀರಕ್ಕೆ ವೃತ್ತಿನಿಮಿತ್ತ ಚಲಿಸಿರುವ ಯೋಗೀಂದ್ರ ಮರವಂತೆ ಅವರ ಲೇಖನಗಳ ಸಂಗ್ರಹ. ಕನ್ನಡ ಸಾಹಿತ್ಯ ಲೋಕಕ್ಕೆ ಒಬ್ಬ ಸಮರ್ಥ ಯುವಲೇಖಕನ ಆಗಮನವನ್ನು ಈ ಪುಸ್ತಕ ಸಾರಿದೆ. ಇದಕ್ಕೆ ಈ ಲೇಖಕನಿಗಿರುವ ವಿಶಿಷ್ಟವಾದ 'ಕಾಣುವ ಕಣ್ಣು', ಇಲ್ಲಿನ ನೆನವರಿಕೆ- ಕನವರಿಕೆಗಳು ಕೇವಲ ಹಳವಂಡವಲ್ಲ. ನಗೆ-ಕುಶಾಲು-ತಮಾಷೆ ಗುಚ್ಛದೊಂದಿಗೆ ತಿಳಿ ವ್ಯಂಗ್ಯ, ನವಿರು ಸೂಜಿಸೂಕ್ಷ್ಮತೆ, ಸಮಗ್ರತೆ, ಗಂಭೀರ ಚಿಂತನೆಯ ಇಲ್ಲಿನ ಲೇಖನಗಳು ಇಂಥ ಪ್ರಕಾರಕ್ಕೆ ಒಂದು ಹೊಸ ಕಾಂತಿ ನೀಡಿವೆ ಎನ್ನುತ್ತಾರೆ ಹಿರಿಯ ಲೇಖಕಿ ವೈದೇಹಿ. ಓದುತ್ತಿದ್ದಂತೆ ಈತ ಬೆಳೆದ ವಾತಾವರಣ ಮತ್ತು ಬೆಳೆಸಿದ ಹಿರಿಯರ ಮೇಲೆ ಎಲ್ಲಿ ಯಾರು ಇತ್ಯಾದಿ ತಿಳಿಯದೆಯೂ ಹಿನ್ನೆಲೆಯಲ್ಲಿ ಮನಸ್ಸಿಗೆ ತಾಕುತ್ತಿರುತ್ತದೆ. ಬೇರೆಯೇ ಸಂಸ್ಕೃತಿಯ ನೆಲದಲ್ಲಿ ನಡೆವ ಲೇಖಕರ ಅಂತರಂಗದ ಸಂವಾದದ ಭಾಷೆಯ ಸೊಬಗಂತೂ ಮನ ಸೆರೆಹಿಡಿಯುವಂತಿದೆ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ರತ್ನಾಕರ ವರ್ಣಿ-ಮುದ್ದಣ-ಅನಾಮಿಕ ದತ್ತಿ (ಗದ್ಯ) ಪ್ರಶಸ್ತಿ ದೊರೆತಿದೆ.
©2025 Book Brahma Private Limited.