ಬೇಟೆ ಸಾಹಿತ್ಯದ ಕುರಿತು ಹಲವು ಕೃತಿಗಳನ್ನು ರಚಿಸಿರುವ ಕದಂಬಾಡಿ ಜತ್ತಪ್ಪ ರೈ ಇವರು ಮೂಲತ ಪುತ್ತೂರಿನವರು. ಈ ಕೃತಿಯಲ್ಲಿ ಒಟ್ಟು ಆಶಯ, ವಿಷಯ , ನಿರೂಪಣೆ ಶೈಲಿ ಎಲ್ಲವೂ ವಿಶಿಷ್ಟವಾಗಿ ಮೂಡಿ ಬಂದಿದೆ. ಬೇಟೆಯ ನೆನಪುಗಳು ಎಂಬ ಈ ಕೃತಿಯೂ , ಬೇಟೆಯ ವಾಸ್ತವತೆ, ಮತ್ತು ಆತ್ಮೀಯತೆಯನ್ನು ತುಂಬಾ ಸೊಗಸಾಗಿ ಓದುಗರನ್ನು ರೋಮಾಂಚನ ಗೊಳಿಸುವ ರೀತಿಯಲ್ಲಿ ಮೂಡಿಬಂದಿದೆ. ಕೃತಿಯಲ್ಲಿ ಕೆಲವು ಕಡೆ ಗದ್ಯ , ಕವನವು ಇರುವುದರಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. 1998 ರಲ್ಲಿ ಈ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮೊದಲ ಮುದ್ರಣ ಕಂಡಿತ್ತು.
ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ 1916ರಲ್ಲಿ ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆ ಸಲ್ಲಿಸಿದವರು. ತುಳುತ್ತ ಪೋರ್ಲು ಅಜ್ಜಬಿರು (ನಾಟಕಗಳು), ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ಉಮರ್ ಖಯ್ಯಾಮನ ರುಬಾಯತ್) ಅಸೆನಿಯಾಗೊ ಕಾಂತಗ ಜೋಗಿ (ಮೂಲ ಆಂಗ್ಲ ಕವಿ ಬ್ರೌನಿಂಗ್‌ನನ ದಿ ಪೈಪರ್ ಬೊಕ್ಕ ಕುವೆಂಪು ಅವರ ಕಿಂದರ ಜೋಗಿ). ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ...
READ MORE