ಸೈನ್ಸ್ ಮತ್ತು ಪರಿಸರ ಸಿಂಚನ

Author : ನಾಗೇಶ ಹೆಗಡೆ

Pages 150

₹ 150.00




Year of Publication: 2019
Published by: ಭೂಮಿ ಬುಕ್ಸ್
Address: #150, ಮೊದಲ ಮುಖ್ಯ ರಸ್ತೆ ಶೇಷಾದ್ರಿಪುರಂ ಬೆಂಗಳೂರು 560020
Phone: 9449177628

Synopsys

ವರ್ತಮಾನದ ವಿಜ್ಞಾನ ಮತ್ತು ಪರಿಸರ ರಂಗದ ವಿದ್ಯಮಾನಗಳ ಕುರಿತ 'ಪ್ರಜಾವಾಣಿ'ಯಲ್ಲಿ 2018ರಲ್ಲಿ ಪ್ರಕಟವಾದ  ಅಂಕಣ ಬರಹಗಳು. ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದ ಪ್ರಮುಖ ತಂತ್ರಜ್ಞಾನ ಸಾಧನೆಗಳನ್ನು. ವಿಜ್ಞಾನದ ವಿಶೇಷಗಳನ್ನು ಹಾಗೂ ನಮ್ಮ ಪರಿಸರದ ಮೇಲೆ ಅವುಗಳ ಪ್ರಭಾವಗಳನ್ನು ಕನ್ನಡದ ಕಿಟಕಿಯ ಮೂಲಕ ಕಂಡ ಸೀಳುನೋಟಗಳು ಇಲ್ಲಿವೆ. ವಿವಾದಗಳಿಗೆ ಸಿಲುಕಿದ ಸಂಗತಿಗಳನ್ನು ಕೆಣಕಿ ಮತ್ತಷ್ಟು ವಿವಾದಗಳನ್ನೆಬ್ಬಿಸಿದ 'ನಮಾಮಿ ಗಂಗೆ', ಹೈಪರ್ ಲೂಪ್, ಕ್ರಯೋಜೆನಿಕ್ಸ್, ಕೈಗಾ ವಿಸ್ತರಣೆ ಮುಂತಾದ ವಿಷಯಗಳು ಇದರಲ್ಲಿದೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books