`ಒಂದೊಳ್ಳೆ ಮಾತು 3’ ರೂಪಾ ಗುರುರಾಜ್ ಅವರ ಕೃತಿಯಾಗಿದೆ. ಇದಕ್ಕೆ ವಿಶ್ವೇಶ್ವರ ಭಟ್ ಅವರ ಬೆನ್ನುಡಿ ಬರಹವಿದೆ; ಪ್ರತಿದಿನ ಪತ್ರಿಕೆಗಳಿಗೆ ಬರೆಯುವುದು ಕಷ್ಟ ಅದರಲ್ಲೂ ಓದುಗರನ್ನು motivate ಮಾಡುವ ಅಂಕಣ ಬರೆಯುವುದು ಇನ್ನೂ ಕಷ್ಟ ಕಾರಣ ಬೇರೆಯವರನ್ನು motivate ಮಾಡುವುದಕ್ಕಿಂತ ಮುನ್ನ ನಮ್ಮನ್ನು ಮಾಡಿಕೊಳ್ಳಬೇಕು. ನಮ್ಮನ್ನು ಯಾರೂ ಬಂದು motivate ಮಾಡುವುದಿಲ್ಲ. ಆ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಮತ್ತು ದಿನವೂ ಮಾಡಿಕೊಳ್ಳಬೇಕು. ಇದು ಒಂಥರಾ ಕಬ್ಬಿಣವನ್ನು ಅಯಸ್ಕಾಂತಕ್ಕೆ ಉಜ್ಜಿ ಉಜ್ಜಿ, ಕಬ್ಬಿಣವನ್ನೇ ಅಯಸ್ಕಾಂತವಾಗಿ ಮಾಡಿಕೊಂಡಂತೆ. ಇದು ತುಸು ಕಷ್ಟದ ಕೆಲಸ. ಇಷ್ಟವಿದ್ದರೆ ಮಾತ್ರ ಮಾಡಬಹುದಾದ ಕೆಲಸ. ಆದರೆ ಈ ಕೆಲಸವನ್ನು ರೂಪಾ ಗುರುರಾಜ್ ಅತ್ಯಂತ ಪ್ರೀತಿ, ನಿಷ್ಠೆ, ಜವಾಬ್ದಾರಿಯಿಂದ ಮಾಡುತ್ತಾ ಬರುತ್ತಿದ್ದಾರೆ. 'ಒಂದೊಳ್ಳೆ ಮಾತು' ಅಂಕಣದಿಂದ ತಮ್ಮ ದಿನಚರಿಯನ್ನು ಆರಂಭಿಸುವ ಅಸಂಖ್ಯ ಓದುಗರಿದ್ದಾರೆ. ಈ ಅಂಕಣ ಒಂದು ದಿನ ಪ್ರಕಟವಾಗದಿದ್ದರೆ ಅಥವಾ ಬೇರೆ ಪುಟಗಳಲ್ಲಿ ಪ್ರಕಟವಾದರೂ ಸಿಡಿಮಿಡಿಗೊಳ್ಳುವ ಓದುಗರಿದ್ದಾರೆ. ಅಷ್ಟರಮಟ್ಟಿಗೆ 'ಒಂದೊಳ್ಳೆ ಮಾತು' ಅವರನ್ನು ಗಪ್ಪಾಗಿ ಕುಳ್ಳಿರಿಸಿಬಿಟ್ಟಿದೆ. ಬಿಸಿಬಿಸಿ ಕಾಫಿಯಂತೆ, ದಿನದ ಆರಂಭಕ್ಕೆ ಬೇಕಾಗುವ ಒಂದು ಹಿತವಾದ ಪ್ರೇರಣೆಯ ಗುಟುಕನ್ನು ರೂಪಾ ನೀಡುತ್ತಿದ್ದಾರೆ. ಇದು ಎಲ್ಲ ವರ್ಗದ ಓದುಗರಿಗೆ, ಎಲ್ಲ ಕಾಲಕ್ಕೆ ಆಪ್ತವಾಗುವ ಬರಹ. ಇದನ್ನು ಹೀರಿಕೊಂಡವನೇ ಪುಣ್ಯವಂತ! - ವಿಶ್ವೇಶ್ವರ ಭಟ್
©2024 Book Brahma Private Limited.