ಮೇಲ್ನೋಟಕ್ಕೆ ಜೋಕ್‌ನಂತೆ ಕಾಣುವ, ಆದರೆ ಜೋಕ್ ಅಲ್ಲದ- ಒಂದು ವ್ಯಂಗ್ಯಗಳೆ 'ವಕ್ರ ತುಂಡೋಕ್ತಿಗಳು'.ಹಾಸ್ಯ,ವ್ಯಂಗ್ಯಗಳ ಮೂಲಕ ತನ್ನ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ.ದಿನಕ್ಕೊಂದು ಪ್ರಕಟಗೊಳ್ಳುತ್ತಿದ್ದ 'ವಕ್ರ ತುಂಡೋಕ್ತಿಗಳ‘ ಸಂಗ್ರಹವೇ ‘ಚಿಕನ್ ಸಿಕ್ಸ್ಟಿ ಫೈವ್- ಇದು ಫ್ಯೂರ್ ವೆಜಿಟೆರಿಯನ್’.ಕೆಲವು ವಕ್ರತುಂಡೋಕ್ತಿಗಳ ಸ್ಕಾಂಪಲ್ ಇಲ್ಲಿದೆ; -ನಿಮ್ಮ ಹೆಂಡತಿಗೆ ಡ್ರೈವಿಂಗ್ ಕಲಿಯಬೇಕು ಎಂತಿದ್ದರೆ ನೀವು ಅವಳ ದಾರಿಗೆ ಅಡ್ಡ ನಿಲ್ಲಬಾರದು,ಮನೆಯಲ್ಲಿ ಸುಖವಾಗಿ ನಿದ್ರೆ ಬರದಿದ್ದರೆ ಹೊರಗೆ ಹೋಗಿ ನಿದ್ರಿಸುವ ಸ್ಥಳಕ್ಕೆ ಸೆಮಿನಾರ್ ಎನ್ನಬಹುದು,ಸಮಯವೇ ಎಲ್ಲವನ್ನೂ ಗುಣಪಡಿಸುತ್ತದೆ. ಅದಕ್ಕಾಗಿವೈದ್ಯರು ರೋಗಿಗಳನ್ನು ಕಾಯಿಸುತ್ತಾರೆ.ಇಂಥ ನೂರಕ್ಕೂ ಹೆಚ್ಚು ವಕ್ರತುಂಡೋಕ್ತಿಗಳು ಈ ಪುಸ್ತಕದಲ್ಲಿವೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE