ಹೆಣ್ಣೊಳನೋಟ-ಮೈಸೂರಿನ ಆಂದೋಳನ ಪತ್ರಿಕೆಯಲ್ಲಿ ವಿವಿಧ ಲೇಖಕಿಯರ ಅಂಕಣ ಬರಹಗಳ ಸಂಗ್ರಹ ಕೃತಿ. ಲೇಖಕಿ ಲೇಖಕಿ ರೂಪ ಹಾಸನ ಸಂಪಾದಿಸಿದ್ದಾರೆ. ಭಾರತೀಯ ಇತಿಹಾಸದಲ್ಲಿ ಒಂದೆಡೆ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಿದ್ದರೆ ಮತ್ತೊಂದೆಡೆ ಹೆಣ್ಣನ್ನು ಕೀಳಾಗಿ ಕಾಣುತ್ತಲೇ ಬಂದಿದೆ.ಹೆಣ್ಣಿ ಮೇಲೆ ನಡೆಯುತ್ತಿರುವ ಇಂತಹ ವಿಪರ್ಯಾಸದ ಆತಂಕಗಳನ್ನು ಚರ್ಚಿಸುವ ಲೇಖಕಿಯ ಚಿಂತನೆಗಳು ಒಡಮೂಡಿವೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ (2018) ಸುಮಾರು ಒಂದು ವರ್ಷ ಕಾಲ ಈ ಅಂಕಣ ಬರಹ ನಿರಂತರವಾಗಿತ್ತು. ಮಹಿಳೆಯರ ಬದುಕಿನ ಸಂಘರ್ಷ, ಒಲೆ ಉರಿಯ ಬೇಗೆಯಿಂದ ಹಿಡಿದು ಹೆಣ್ಣಿನ ಭ್ರೂಣಹತ್ಯೆವರೆಗೂ... ಸಮಾಜದ ವ್ಯಂಗ್ಯ, ಉದಾಸೀನಗಳನ್ನು ಸಹಿಸಿಕೊಳ್ಳುತ್ತಲೇ ಆನಿವಾರ್ಯ ಸಂದರ್ಭಗಳಲ್ಲಿ ಮನೆಯ ಒಳಗೂ ಹೊರಗೂ ದುಡಿಯುತ್ತ ಸಂಸಾರದ ನೊಗವನ್ನು ಗಂಡಿಗಿಂತ ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದನ್ನು, ಮಾನಿನಿಯರ ಎದೆಯಾಳದ ನೋವನ್ನು, ಗರ್ಭದೊಳಗಿನ ಚೀರಾಟವನ್ನು ಇಂಚಿಂಚು ವಿಶ್ಲೇಷಿಸಿ, ಅಕ್ಷರ ರೂಪ ನೀಡಿದ ಬರಹಗಳು ನೋವಿನ ದನಿಯನ್ನು ಸಮಗ್ರವಾಗಿ ಹಿಡಿದಿಟ್ಟಿದ್ದು ಅರ್ಥಪೂರ್ಣವೆನಿಸಿದೆ.
ಸುಮಾರು 31 ಲೇಖಕಿಯರ, 50 ಲೇಖನಗಳು ಈ ಸರಣಿಯಲ್ಲಿ ಪ್ರಕಟವಾಗಿದೆ. ಧರ್ಮ, ಜಾತಿ ಭೇದದ ಹಂಗಿಲ್ಲದೆ ಎಲ್ಲ ಬಗೆಯ ಹೆಣ್ಣುಮಕ್ಕಳ ಮನದೊಳಗೆ ಸದಾ ರಿಂಗಣಿಸುವ ಸ್ವಾತಂತ್ರ್ಯ ಸಬಲೀಕರಣದ ತುಮುಲಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ರೀತಿ ಅನನ್ಯ.
ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ) , ಕಡಲಿಗೆಷ್ಟೊಂದು ಬಾಗಿಲು, ಲಹರಿ , ಮಹಿಳೆ ಮತ್ತುಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ...
READ MORE