ಬಣ್ಣದ ಬುಗುರಿ

Author : ಬಿ.ಎಂ. ಹನೀಫ್

Pages 140

₹ 105.00




Published by: ಸಂವಹನ ಪ್ರಕಾಶನ
Address: ಬೆಂಗಳೂರು

Synopsys

‘ಬಣ್ಣದ ಬುಗುರಿ’ ಕೃತಿಯು ಬಿ.ಎಂ. ಹನೀಫ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. 32 ವಾರಗಳ ಕಾಲ ಬರೆದ ಅಂಕಣ ಬರಹಗಳಿದ್ದು, ಸೃಜನಶೀಲ ಗುಣಕ್ಕೆ ಊನಬಾರದಂತೆ ಜಗತ್ತಿನ ಹಲವು ಸಮಸ್ಯೆಗಳನ್ನು ಅನಾವರಣಗೊಳಿಸುವ ಪ್ರಯತ್ನದಲ್ಲಿ ಲೇಖಕರು ಯಶಸ್ಸನ್ನು ಕಂಡಿದ್ದಾರೆ. `ಮಧ್ಯಮರ ಸಂಸ್ಕೃತಿ, ಅಲಕ್ಷಿತ ಸಂಸ್ಕೃತಿ, ಇಸ್ಲಾಂ ಸಂವೇದನೆ, ಆಹಾರ ಪದ್ಧತಿ, ಸೌಂದರ್ಯ, ಭಾಷಾ ಸಮಸ್ಯೆ, ಜಾತಿ, ಧರ್ಮ, ಮತಾಂತರ ಮುಂತಾದ ಸಮಾಜ ಸರ್ವಮುಖಗಳೂ ಇಲ್ಲಿ ವಿಶ್ಲೇಷಣೆಗೊಳಪಟ್ಟಿವೆ. ಪ್ರಾದೇಶಿಕ ಸಂಸ್ಕೃತಿಯ ಚಹರೆಗಳನ್ನು ನಿರ್ವಚಿಸುತ್ತಲೇ ಸಮಸ್ಯೆಗಳ ಪರಿಹಾರದತ್ತ ಗಮನ ಸೆಳೆಯುವ ಪ್ರಸ್ತುತ ಬರಹಗಳು ಕೆಲವು ಪತ್ರದ ಮಾದರಿಯಲ್ಲಿದ್ದರೆ ಇನ್ನು ಕೆಲವು ಲೇಖನದ ಸ್ವರೂಪದಲ್ಲಿವೆ. ಕಥೆಯ ಧಾಟಿಯಲ್ಲಿ ನಮ್ಮ ನಡುವಿನ ಸಮಸ್ಯೆಗಳನ್ನು ಬಿಚ್ಚಿಡುವುದರಿಂದ ತೀರಾ ಆಪ್ತವೆವಿಸುತ್ತವೆ. ಸಮಾಜದ ವಿಭಿನ್ನ ವರ್ಗಗಳ ಶೋಚನೀಯ ಸ್ಥಿತಿಯನ್ನ ನಿರೂಪಿಸುವಾಗ ದುಡಿಯುವ ವರ್ಗದ ಸಂಕಷ್ಟಗಳನ್ನ ಗುರುತಿಸುವ ಮಾರ್ಗವೇ ಹೆಚ್ಚು ಗ್ರಹಿತವಾಗುತ್ತದೆ. ಜಾಗತೀಕರಣದ ಯುಗದಲ್ಲಿ ಅಸಂಘಟಿತ ಹೆಣ್ಣುಮಕ್ಕಳ ಬಡತನದ ಬಗ್ಗೆ ಕಾಳಜಿವಹಿಸುತ್ತಿಲ್ಲವೆಂಬ ವಿಷಾದದೊಂದಿಗೆ ಸಾಮಾನ್ಯ ಪೇದೆಗಳ ಆರ್ಥಿಕ ದುಃಸ್ಥಿತಿಯ ಚಿತ್ರವನ್ನು ಕಟ್ಟಿಕೊಡಲು ಮರೆಯುವುದಿಲ್ಲ. ಕೆಲವು ಸಂಗತಿಗಳು ಹೊಸವಲ್ಲದಿದ್ದರೂ ಅವು ಪಡೆದುಕೊಳ್ಳುವ ತಿರುವು ಮಾತ್ರ ನೂತನವಾದುದು. ನಿರೂಪಣೆ ಸರಳವೆನಿಸಿದರೂ ಒಳಗೊಳ್ಳುವ ವಿಷಯ ಮಾತ್ರ ತೀರಾ ಗಂಭೀರ. ಸಮಸ್ಯೆಗಳ ತಡಕಾಟದಲ್ಲಿ ಶೋಧಕನ ದೃಷ್ಟಿಯೊಂದಿಗೆ ಮಾನವಪರ ಧೋರಣೆಯನ್ನು ಗುರುತಿಸಬಹುದು. ವಿಷಯಗಳಿಗೆ ಲಗ್ಗೆ ಹಾಕುವಾಗ ಸಾಹಿತ್ಯ ಮತ್ತು ಚರಿತ್ರೆ ಸಂದರ್ಭೋಚಿತ ಆಕಾರವಾಗಿ ಬಳಕೆಗೊಳ್ಳುತ್ತವೆ. ಸೂಫಿ ಸಂತರು, ಬೀಚಿ, ದಿನಕರ ದೇಸಾಯಿ, ಯಯಾತಿ – ಮುಂತಾದವರನ್ನು, ತಾಜಮಹಲಿನ ನೆಪದಲ್ಲಿ ಅಂತರಧರ್ಮೀಯ ವಿವಾಹ ಸಂಬಂಧಗಳನ್ನು, ನಗೆಹಬ್ಬದ ನೆಪದಲ್ಲಿ ಮನುಷ್ಯನ ಸಿನಿಕತನ ಇತ್ಯಾದಿ ಗಮನಿಸಿದರೆ ವರ್ತಮಾನದಲ್ಲಿದ್ದು ಪರಂಪರೆಯನ್ನು ನೆನಪಿಸುವಲ್ಲಿ ಬರಹಗಳು ಸಾಫಲ್ಯ ಹೊಂದುತ್ತವೆ.

About the Author

ಬಿ.ಎಂ. ಹನೀಫ್
(04 August 1962)

ಪತ್ರಕರ್ತ, ಬರಹಗಾರ ಬಿ.ಎಂ. ಹನೀಫ್‌ ಅವರು ಜನಿಸಿದ್ದು 1962 ಆಗಸ್ಟ್‌ 04ರಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೆಳ್ಳಾಯರು ಇವರ ಹುಟ್ಟೂರು. ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದ ಇವರು ಕಾನೂನು ಪದವಿ ಪಡೆದಿದ್ದಾರೆ. ಜರ್ಮನಿಯ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಜರ್ನಲಿಸಂ ಕಾಲೇಜಿನಲ್ಲಿ ವಾಣಿಜ್ಯ ಪತ್ರಿಕೋದ್ಯಮ ಕೋರ್ಸ್‌ ಮಾಡಿದ್ದಾರೆ. ಮುಂಗಾರು ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ಸುಧಾ ವಾರ ಪತ್ರಿಕೆ ಮುಖ್ಯಸ್ಥರಾಗಿ ದಶಕದ ಕಾಲ ಕೆಲಸ ಮಾಡಿದ್ದಾರೆ. ಪ್ರಸ್ತುತ ಪ್ರಜಾವಾಣಿಯಲ್ಲಿ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಹನೀಫ್‌ ಅವರ ಪ್ರಮುಖ ಕೃತಿಗಳೆಂದರೆ ಅನನ್ಯ ಸಮಾಜವಾದಿ ಲೋಹಿಯಾ, ಇತಿಹಾಸ ಮತ್ತುಇಸ್ಲಾಂ, ಕತ್ತಲೆಗೆ ...

READ MORE

Related Books