ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯ ಸಂಪುಟಗಳ ಮಾಲಿಕೆಯಡಿ ಪ್ರಕಟಿಸಿದ ಕೃತಿ-ಅಂಕಣ ಬರಹ. ಲೇಖಕಿ ಪ್ರತಿಭಾ ನಂದಕುಮಾರ ಸಂಪಾದಕರು. ರಾಷ್ಟ್ರೀಯ ಮಹಾಸಭೆಯೂ ಶ್ರೀಮತಿ ಸರೋಜಿನಿ ದೇವಿಯವರೂ (ಆರ್. ಕಲ್ಯಾಣಮ್ಮ), ಬೆಕೆಟ್ ನೆನಪು (ಡಾ. ವಿಜಯಾ), ಹುಡುಗರಿಗೇಕೆ ಬೇರೆಯೇ ನೀತಿ ಸಂಹಿತೆ? (ಡಾ. ಸಂಧ್ಯಾ ಎಸ್.ಪೈ), ಕೃಷ್ಣನ ಲೆಕ್ಕದಂತಾದ ಕುದುರೆಗಳ ಲೆಕ್ಕ (ಸುಧಾಮೂರ್ತಿ), ಸಿಂಗರ್ ಮೆಶಿನ್ ಮೀನಾಕ್ಷಮ್ಮ (ವೇದೇಹಿ), ಎರಡು ದಿನದ ಮದುವೆ ಕಾಐðಕ್ರಮಕ್ಕಿರುವ ಪ್ಲಾನ್ ಪೂರ್ತಿ ದಾಂಪತ್ಯಕ್ಕೇಕಿಲ್ಲ? (ಗೀತಾ ಬಿ.ಯು), ರಾಜಕಾರಣಿಗಳ ಪತ್ನಿಯರು ಆಟದ ಗೊಂಬೆಗಳೇ? (ಆರ್. ಇಂದಿರಾ), ಹುಷಾರ್ ! ಅಮ್ಮನಿಗೆ ಏನೂ ಅನ್ನಬೇಡಿ (ಆರ್. ಪೂರ್ಣಿಮಾ), ಸಂಜೆಗತ್ತಲಿನ ಮನುಷ್ಯರು (ಉಮಾ ರಾವ್), ಮಹಿಳೆ, ಮನೋಬಲ ಮತ್ತು ಸರ್ಕಾರ (ರೇಣುಕಾ ನಿಡಗುಂದಿ), ಹೆರ್ಣಣು ಹೊರಗೆ ದುಡಿಯುವುದು ಅಗತ್ಯವೇ? (ಡಾ. ಎಚ್.ಎಸ್. ಶ್ರೀಮತಿ), ನಾರೀ ನುಡಿ ಮಾದರಿಗಳ ಕಟ್ಟೋಣದತ್ತ-2 (ಬಿ.ಎನ್. ಸುಮಿತ್ರಾಬಾಯಿ), ಮಕ್ಕಳ ಆರೋಗ್ಯ ಕಾಳಜಿಯ ಕೊರತೆ (ಡಾ. ಸುಶಿ ಕಾಡನಕುಪ್ಪೆ ) ಹೀಗೆ ಒಟ್ಟು 50 ಅಂಕಣ ಬರಹಗಳಿವೆ.
ಕೃತಿಯ ಕುರಿತು ಪ್ರಧಾನ ಸಂಪಾದಕ ನಾಡೋಜ ಡಾ. ಮನು ಬಳಿಗಾರ ‘ಕನ್ನಡ ಲೇಖಕಿಯರ ಅನುಭವ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಈ ಮಹಿಳಾ ಸಂಪುಟವು ಹಿಡಿದು ಇಟ್ಟಿದೆ. ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟವು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ...
READ MORE