‘ಜಮ್ಮಾಮಲೆ’ ಕೃತಿಯು ಸಂತೋಷ್ ತಮ್ಮಯ್ಯ ಅವರ ಅಂಕಣಬರಹಗಳ ಸಂಕಲನವಾಗಿದೆ. ಈ ಕೃತಿಯು ಕೊಡಗಿನ ಕುರಿತು ಹಲವಾರು ವಿಚಾರಗಳನ್ನು ತಿಳಿಸುತ್ತದೆ. ಇವೆಲ್ಲದರ ಹೊರತಾಗಿಯೂ ಕೊಡಗಿನಲ್ಲೊಂದು ಸಂವೇದನೆ ಇನ್ನೂ ಜೀವಂತವಿದೆ. ಮುಚ್ಚಿದ ಬೂದಿಯೊಳಗೆ ಇನ್ನೂ ಆರದ ಕಿಡಿಯಿದೆ. ಪರಂಪರೆಯನ್ನು ಎದೆಯಲ್ಲಿ ಹೊತ್ತು ಬದುಕುವ ಬದುಕುವ ಪೀಳಿಗೆಯಿದೆ. ಕೊಡಗನ್ನು ಹಾಳುಮಾಡುವ ದುರುಳರ ವಿರುದ್ಧ ಆಕ್ರೋಶವಿದೆ, ಕೊಡಗನ್ನು ಆರಾಧಿಸುವ ಸ್ವಾಭಿಮಾನಿ ಪರಂಪರೆಯಿದೆ. ಹಳೆಯ ಕೊಡಗನ್ನು ನೆನಪು ಮಾಡಿಕೊಳ್ಳುವ ಜನರಿನ್ನೂ ಇದ್ದಾರೆ. ಆ ನೆನಪುಗಳ ಹಿಂದೆ ಸಾಂಸ್ಕೃತಿಕ ಪುನರುತ್ಥಾನದ ಕನಸುಗಳಿವೆ. ವ್ಯವಸ್ಥೆಯ ಬಗೆಗಿನ ಆಕ್ರೋಶವಿದೆ. ಹೋರಾಟದ ಕೆಚ್ಚಿದೆ ಎನ್ನುವಂತಹ ಹಲವಾರು ವಿಚಾರಗಳನ್ನು ಕೃತಿಯು ತಿಳಿಸುತ್ತದೆ. ಇನ್ನು ಇಲ್ಲಿನ ಬರವಣಿಗೆಗಳು ಹೊಸದಿಗಂತದ ‘ಉಘೇ ವೀರಭೂಮಿಗೆ’ ಅಂಕಣಕ್ಕೆ ಬರೆದ ಬರಹಗಳಾಗಿವೆ. ಆ ಬರಹಗಳ ವಿಸ್ತೃತ ರೂಪವನ್ನೇ ಇಲ್ಲಿ ಪೋಣಿಸಲಾಗಿದೆ. ಇಲ್ಲಿನ ಎಲ್ಲಾ ಬರಹಗಳೂ ಹೊರಜಗತ್ತು ಕಾಣದ ಕೊಡಗಿನ ಒಂದು ಎಳೆಯನ್ನು ಓದುಗರ ಮುಂದಿಡುತ್ತದೆ.
ಸಂತೋಷ್ ತಮ್ಮಯ್ಯ ಅಂಕಣಕಾರರು. ಕನ್ನಡಪ್ರಭ ಪತ್ರಿಕೆಯ ವಾರ್ತಾ ಸಂಪಾದಕರಾಗಿದ್ದಾರೆ. ಕೃತಿಗಳು: ಸಮರ ಭೈರವಿ, ಉಘೇ ವೀರಭೂಮಿಗೆ ...
READ MORE