ಪತ್ರಕರ್ತ ಹಾಗೂ ಲೇಖಕ ಪ್ರತಾಪಸಿಂಹ ಅವರು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ಕೃತಿ-ಬೆತ್ತಲೆ ಜಗತ್ತು ಭಾಗ-1. ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳಿಗೆ ಸ್ಪಂದನೆ, ಅವುಗಳ ಸಮರ್ಥನೆ, ತಿರಸ್ಕಾರ, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರದ ಭಾಷೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಬರಹಗಳು ಓದುಗರ ಗಮನ ಸೆಳೆಯುತ್ತವೆ. ಪ್ರಖರ ವೈಚಾರಿಕ ಬರಹಗಳಿಂದಾಗಿ ಇಂದಿಗೂ ಈ ಬರಹಗಳು ತಾಜಾತನವನ್ನು ಒಳಗೊಂಡಿವೆ.
ಪ್ರತಾಪ್ ಸಿಂಹ ಮೂಲತಃ ಸಕಲೇಶಪುರದವರು. ಪದವಿ ಪೂರ್ವ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್.ಡಿ.ಎಂ ಕಾಲೇಜಿನಿಂದ ಮನಃಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಎಂಸಿಜೆ ಮಂಗಳೂರಿನಿಂದ ಪತ್ರಿಕೋದ್ಟಮದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಎಂ ಐ ಸಿ ಇ ಮಂಗಳೂರಿನಿಂದ ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ವಿಜಯ ಕರ್ನಾಟಕದಲ್ಲಿ ಬೆತ್ತಲೆ ಜಗತ್ತು, ಕನ್ನಡಪ್ರಭದಲ್ಲಿ ಸುದ್ದಿ ಸಂಪಾದಕರಾಗಿ ಬೆತ್ತಲೆ ಪ್ರಪಂಚ ಅಂಕಣ ಬರೆಯುತ್ತಿದ್ದರು. ಬೆತ್ತಲೆ ಜಗತ್ತು- 14 ಪುಸ್ತಕಗಳು ( ಅಂಕಣ ಬರಹಗಳ ಸಂಗ್ರಹ), ನರೇಂದ್ರ ಮೋದಿ (ಯಾರೂ ತುಳಿಯದ ಹಾದಿ), ಟಿಪ್ಪು ಸುಲ್ತಾನ ಸ್ವಾತಂತ್ರವೀರನಾ, ಮೈನಿಂಗ್ ಮಾಫಿಯಾ, ಮೋದಿ ಮುಸ್ಲಿಂ ...
READ MORE