ಲೇಖಕ ಡಾ. ರಾಜಶೇಖರ ಮಠಪತಿ (ರಾಗಂ) ಅವರ ಕೃತಿ ‘ಕಾವ್ಯಕ್ಕೆ ಉರುಳು, ಭಾಗ-4'. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಅಂಕಣಗಳ ಬರಹಗಳಿವು. ಸಾಮಾಜಿಕ ಹೊಣೆಗಾರಿಕೆಯನ್ನೇ ಉಸಿರಾಗಿಸಿಕೊಂಡು ಕಥೆ, ಕವನ, ಬರಹಗಳನ್ಕಾನು ರಚಿಸುತ್ವ್ಯತಿದ್ಗದ ವಿಶ್ವವಿಖ್ಯಾತರ ಕೊನೆಯ ದಿನಗಳು, ತಮ್ಮ ಸಾಹಿತ್ಯವೇ ತಮಗೆ ಉರುಳಾದ ಅಂದರೆ, ಪೇಚಿಗೆ ಸಿಲುಕಿಸಿದ ದುರಂತಮಯ ವಾತಾವರಣವನ್ನು ಎದುರಿಸಿದರು ಎಂಬುದು. ಉತ್ತಮರನ್ನು ಈ ಇತಿಹಾಸ ಎಂದಿಗೂ ಗುರುತಿಸಿಲ್ಲ; ಅವರೊಂದಿಗೆ ಸೌಜನ್ಯದಿಂದ ವರ್ತಿಸಲಿಲ್ಲ. ಅವರಿಗೆ ಬದುಕಿ ರೀತಿಯೇ ಗೊತ್ತಿಲ್ಲ ಎಂಬಂತೆ ಶಿಕ್ಷೆ ನೀಡಿದರು. ಕೆಲವರನ್ನು ವಿಷ ಕುಡಿಸಿ ಸಾಯಿಸಿದರೆ, ಕೆಲವರನ್ನು ಗಲ್ಲಿಗೆ ಏರಿಸಿದರು. ಈ ಅರ್ಥದಲ್ಲಿ, ‘ಕಾವ್ಯಕ್ಕೆ ಊರುಳು’ ಶೀರ್ಷಿಕೆಯ ಕೃತಿಯು ತಮ್ಮ ಬರಹಗಳಿಂದ ಖ್ಯಾತಿ ಪಡೆದವರ ಜೀವನ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...
READ MORE