‘ಹೊರದೇಶವಾಸಿ’ ಇದು ವಿದೇಶವಾಸಿಯ ಇನ್ನೊಂದು ಅವತಾರ. ಕೊರೋನಾ ಕಾಲದಲ್ಲಿ ಆರಂಭಿಸಿದ ಅಂಕಣ ಪಯಣ ಈಗಾಗಲೇ ಮೂರು ವರ್ಷ ದಾಟಿದೆ. ಅಂಕಣ ಆರಂಭಿಸುವಾಗ ಇಷ್ಟು ಬರೆಯಬಲ್ಲೆ ಎಂದು ನನಗೇ ಭರವಸೆ ಇರಲಿಲ್ಲ. ಇದೆಲ್ಲ ಸಾಧ್ಯವಾದದ್ದು ಪತ್ರಿಕೋದ್ಯಮದ ದ್ರೋಣಾಚಾರ್ಯ, ವಿಶ್ವವಾಣಿಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಷ್ವರ ಭಟ್ಟರಿಂದ. ಅವರ ಪ್ರೋತ್ಸಾಹ, ಮಾರ್ಗದರ್ಶನ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಯಾವುದೇ ಭಿಡೆ ಇಲ್ಲದೇ ಹೇಳುತ್ತೇನೆ. ಅಂಕಣ ಬರೆಯುವುದು ಎಂದರೆ ಪ್ರತಿ ವಾರ ವಿಷಯಕ್ಕಾಗಿ ಬೇಟೆ. ಒಮ್ಮೆ ಬೇಟೆ ಸಿಕ್ಕರೂ ಅಲ್ಲಿಗೇ ನಿಲ್ಲುವುದಿಲ್ಲ. ಸಿಕ್ಕ ಬೇಟೆಯನ್ನು ಬೇಯಿಸಬೇಕು, ಪಾಕ ಸಿದ್ಧಪಡಿಸಬೇಕು, ಹದಗೊಳಿಸಬೇಕು, ರುಚಿಗೆ ಬೇಕಾದಷ್ಟು ಉಪ್ಪು, ಖಾರ, ಸಿಹಿ ಹಾಕಿ ಓದುಗ ದೊರೆಗೆ ಉಣಬಡಿಸಬೇಕು. ಸ್ವಲ್ಪ ಹೆಚ್ಚು-ಕಮ್ಮಿ ಆದರೂ ನಾನು ಬಡಿಸಿದ್ದನ್ನು ಆ ದೊರೆ ಯಾವ ಮುಲಾಜಿಲ್ಲದೆ ತಿರಸ್ಕರಿಸುತ್ತಾನೆ. ಅದಕ್ಕೆ ಹೆಚ್ಚಿನ ಕಾಳಜಿವಹಿಸಬೇಕು. ಈ ನಿಟ್ಟಿನಲ್ಲಿ ಬರವಣಿಗೆ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ, ಬದ್ಧತೆಯನ್ನೂ ಕಲಿಸಿಕೊಟ್ಟಿದೆ.
ಅಂಕಣಕಾರ, ಲೇಖಕ ಕಿರಣ್ ಉಪಾಧ್ಯಾಯ ಅವರು ವಿಕಿ ಬುಕ್ಸ್ ಮುಖ್ಯಸ್ಥರು. ಪ್ರಸ್ತುತ ಬಹ್ರೈನ್ ನಲ್ಲಿ ವಾಸವಿದ್ದಾರೆ. ಕೃತಿಗಳು: ವಿಶ್ವತೋಮುಖ ...
READ MORE