ಮುತ್ತಿನ ತೆನೆ

Author : ಎ.ಎಸ್. ಮಕಾನದಾರ

Pages 224

₹ 250.00




Published by: ನಿರಂತರ ಪ್ರಕಾಶನ
Address: ಎಂ ಆರ್ ಅತ್ತಾರ ಬಿಲ್ಡಿಂಗ್ ಅಮರೇಶ್ವರ್ ನಗರ 5ನೆ ಕ್ರಾಸ್ ಮೀನುಗಾರರ ಇಲಾಖೆಯ ಹತ್ತಿರ, ಗದಗ 582103
Phone: 9916480291

Synopsys

ಎ.ಎಸ್.ಮಕಾನದಾರ ಕನ್ನಡದಲ್ಲಿ ಹೆಸರು ಮಾಡಿದ ಸೂಕ್ಷ್ಮ ಸಂವೇದನೆಯ ಬರಹಗಾರ. ಬರವಣಿಗೆ ಕೇವಲ ತಪಸ್ಸಲ್ಲ ಅದರಾಚೆಗಿನ ಮಹಾಧ್ಯಾನ. ಎ.ಎಸ್.ಮಕಾನದಾರ ಅವರ ವ್ಯಕ್ತಿ ಚಿತ್ರಗಳ ಅಂಕಣ ಬರಹ ‘ಮುತ್ತಿನ ತೆನೆ’. ಲೇಖಕ ಸಿದ್ದುಯಾಪಲಪರವಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಏನಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು.ಕೆಲವರಿಗೆ ಇದು ದೇವಕೊಡುಗೆ ಮತ್ತೆ ಕೆಲವರು ಸಾಧನೆಯಿಂದ ರೂಢಿಸಿಕೊಂಡಿರುತ್ತಾರೆ. ಮಕಾನದಾರ ಅವರು ತಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ( ಅಂದರೆ ನ್ಯಾಯಾಧೀಶರು ಮತ್ತು ವಕೀಲರನ್ನು ಹೊರತುಪಡಿಸಿ) ಸಾಧನೆಗಳನ್ನು ಇಲ್ಲಿನ ಲೇಖನಗಳಲ್ಲಿ ತುಂಬಾ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಬಹುಶಃ ಇಲಾಖೆಯ ಪತ್ರಿಕೆಯೊಂದು ಈ ರೀತಿಯ ದಾಖಲಾರ್ಹ ಕಾರ್ಯ ಮಾಡಿದ್ದು ಇದೇ ಪ್ರಥಮ ಎನಿಸುತ್ತದೆ. ನ್ಯಾಯಾಂಗ ಇಲಾಖೆಯ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಾಧಕರ ಪರಿಚಯ ಇಲ್ಲಿದೆ.ಇವರೆಲ್ಲ ತುಂಬಾ ಹೆಸರು ಮಾಡಿದ ವ್ಯಕ್ತಿಗಳು ಆದರೆ ಇವರೆಲ್ಲ ನ್ಯಾಯಾಂಗ ಇಲಾಖೆಯವರು ಎಂಬುದು ಲೇಖನಗಳನ್ನು ಓದಿದ ಮೇಲೆ ಗೊತ್ತಾಯಿತು. ತಮ್ಮ ಇಲಾಖೆಯ ಕರ್ತವ್ಯ ನಿರ್ವಹಿಸಿ ಉಳಿದ ಅಲ್ಪ ಸಮಯದಲ್ಲಿ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಗೆ ಸಮಯ ಹೊಂದಿಸಿಕೊಂಡಿರುವುದು ಅನುಕರಣೀಯ ಮತ್ತು ಅಭಿನಂದನೀಯ ಎಂಬುದಾಗಿ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books