‘ಸಂಪಾದಕರ ಸದ್ಯಶೋಧನೆ ಭಾಗ -2’ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳಾಗಿವೆ. ಯಾವ ವಿಷಯದ ಕುರಿತಾದರೂ ಬರೆಯಬಹುದು, ಕೀಯ, ಸ್ವಕೀಯ, ಪರಕೀಯ.. ಹೀಗೆ ಯಾವುದಾದರೂ ಆದೀತು. ಆದರೆ ಅದು ಕುತೂಹಲವಾಗಿರಬೇಕು, ಆಸಕ್ತಿದಾಯಕವಾಗಿರಬೇಕು, ಓದಿಸಿಕೊಂಡು ಹೋಗಬೇಕು, ಜತೆಯಲ್ಲಿ ಒಂದಷ್ಟು ಹೊಸ ಮಾಹಿತಿ, ಮರೆತು ಹೋದ ಸಂಗತಿಗಳಿರಬೇಕು, ನೆನಪುಗಳನ್ನು ಕೆದಕಿದರೂ ಆದೀತು, ಮಾರುದ್ದ ಹೇಳಿ ಬೋರು ಹೊಡೆಸುವ ಬದಲು ಚೋಟುದ್ದವೇ ಸೈ ಎನ್ನುವಂತಿರಬೇಕು. ಅಷ್ಟಾಗಿ ಗೊತ್ತಿರದ ವಿಷಯವಾದರೆ ಇನ್ನೂ ಒಳ್ಳೆಯದು. ಈ ಭಾವವನ್ನು ಹೀರಿ, ಹಿಂಡಿ, ಅದ್ದಿ ಬರೆದರೆ ಅದು 'ಸಂಪಾದಕರ ಸದ್ಯಶೋಧನೆ' ಆಗುತ್ತದೆ ಎನ್ನುತ್ತಾರೆ ಲೇಖಕ ವಿಶ್ವೇಶ್ವರ ಭಟ್. ಅವರ ಅಂಕಣ ಬರಹಗಳು ಈ ಕೃತಿಯನ್ನು ಸಂಕಲನಗೊಂಡಿವೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE