ಸಾಹಿತ್ಯ, ಸಂಸ್ಕೃತಿ, ಕಲೆ, ಅಧ್ಯಾತ್ಮ, ಶಿಕ್ಷಣ, ಸಂಗೀತ, ಕಾನೂನು ಮುಂತಾದ ಕೆಲವೇ ಕ್ಷೇತ್ರಗಳ ಪ್ರಮುಖ ವ್ಯಕ್ತಿಚಿತ್ರಗಳ ಸಂಗ್ರಹ ಕೃತಿ-ಬೆಳಕು ಚೆಲ್ಲಿದ ಬದುಕು. ಸಾಹಿತಿ ಎಚ್ಚೆಸ್ಕೆ 1965 ರಿಂದ 1980ರ ಅವಧಿಯಲ್ಲಿ ಸುಧಾ ಪತ್ರಿಕೆಯಲ್ಲಿ ‘ವಾರದಿಂದ ವಾರಕ್ಕೆ’ ಅಂಕಣದಲ್ಲಿ ಪ್ರಕಟವಾಗುತ್ತಿದ್ದ ವ್ಯಕ್ತಿ ಲೇಖನಗಳನ್ನು ಇಲ್ಲಿ ದಾಖಲಿಸಿದ್ದು, ಆಕರ್ಷಕ ಬರವಣಿಗೆಯಿಂದ ಓದುಗರ ಗಮನವನ್ನು ಸೆಳೆದಿತ್ತು. ಕುವೆಂಪು, ನಗೆ ಮೊಗದ ಅಜ್ಜ, ಡಿವಿಜಿ, ವಾಣಿ, ಎಂ. ರಾಮರಾವ್, ಗಿರೀಶ್ ಕಾರ್ನಾಡ್, ಗೊರುರು ರಾಮಸ್ವಾಮಿ ಅಯ್ಯಂಗರ್, ಸೇಡಿಯಾಪು ಕೃಷ್ಣಭಟ್ಟ, ನಿರಂಜನ, ಜಯದೇವಿ ತಾಯಿ ಲಿಗಾಡೆ ಸೇರಿದಂತೆ 306 ವ್ಯಕ್ತಿಚಿತ್ರಗಳನ್ನು ಒಳಗೊಂಡ ಬೃಹತ್ ಗ್ರಂಥವಿದು.
ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ‍್ಯರು ಮೈಸೂರಿನವರು. ಕೃಷ್ಣರಾಜನಗರ ತಾಲ್ಲೂಕಿನ ಹಳೆಯೂರು ಗ್ರಾಮದವರು. ತಂದೆ ಎಚ್. ಶ್ರೀನಿವಾಸ ಅಯ್ಯಂಗಾರ್, ತಾಯಿ ಅಲಮೇಲಮ್ಮ. ಜನನ 06-08-1920. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಕಾಂ. ಪದವೀಧರರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ) ಪದವಿ. ಪತ್ರಿಕೋದ್ಯಮ ಮತ್ತು ಅಧ್ಯಾಪಕ ವೃತ್ತಿ. ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕರಾಗಿದ್ದರು. ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರು. ಕಾದಂಬರಿಗಳು-ಮುಕ್ತಿಮಾರ್ಗ, ಬಯಕೆಯ ಬಲೆ, ಕುರುಕ್ಷೇತ್ರ. ವ್ಯಕ್ತಿಚಿತ್ರ-ಶ್ರೀರಾಮಾನುಜ, ಎತ್ತರದ ವ್ಯಕ್ತಿಗಳು, ಡಾ. ವಿ.ಕೆ.ಆರ್.ವಿ. ರಾವ್, ಬದುಕು-ಬೆಳಕು, ಬೆಳಕು ಚೆಲ್ಲಿದ ಬದುಕು, ಲಾಲ್ ...
READ MORE