ದೀಪಾ ಹಿರೇಗುತ್ತಿ ಅವರು ’ಸೋಲನ್ನೇ ಸೋಲಿಸಬಹುದು’ ಎಂಬ ಆಶಯ ಹೊಂದಿರುವ ಪುಸ್ತಕ ಫಿನಿಕ್ಸ್. ಯಶಸ್ಸು ದೊರೆತವರ ಸಂಭ್ರಮ-ಸಂತಸ ನೋಡಿದವರಿಗೆ ಅವರನ್ನು ಅಭಿನಂದಿಸಬೇಕು ಎನ್ನಿಸದೇ ಇರದು. ಫಿನಿಕ್ಸ್ ಯಶೋಗಾಥೆಗಳ ಸಂಕಲನ. ಏಷ್ಯನ್ ಕ್ರೀಡೆಗಳು ಹಾಗೂ ಒಲಂಪಿಕ್ ಪಂದ್ಯಗಳಲ್ಲಿ ಪದಕ ಗೆದ್ದವರು ಹಾಗೂ ಪರಿಶ್ರಮದಿಂದ ಐಎಎಸ್- ಐಪಿಎಸ್ ಪಾಸಾದವರು, ವಿಜ್ಞಾನಿಗಳು ಹೀಗೆ ಹಲವು ಯಶಸ್ವಿ ವ್ಯಕ್ತಿಗಳ ಸಾಧನೆಯನ್ನು ಲೇಖಕಿ ಕಟ್ಟಿಕೊಟ್ಟಿದ್ದಾರೆ. ಮೂವತ್ತು ದಾಟುವ ಮುನ್ನವೇ ಅಸಾಧರಣ ಸಾಧನೆ ಮಾಡಿದವರು ಹಾಗೂ ರೋಲ್ ಮಾಡೆಲ್ ಆಗಿರುವವರ ಯಶೋಗಾಥೆಗಳು ಈ ಸಂಕಲನದಲ್ಲಿವೆ. ಈ ಪುಸ್ತಕದ ಬರಹಗಳು ಕೇವಲ ಗೆಲುವಿನ ಕಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಯಶಸ್ಸು ದೊರೆಯಬೇಕಾದರೆ ಕೈಗೊಳ್ಳಬೇಕಾದ ಮಾರ್ಗಗಳ ವಿವರಗಳನ್ನು ಒಳಗೊಂಡಿದೆ. ಸೋಲುಗಳ ಸರಣಿ ಕತ್ತರಿಸಿ ಕೊನೆಗೊಮ್ಮೆ ಗೆಲುವು ಸಾಧಿಸಿದವರ ವಿವರ ಕೂಡ ಈ ಪುಸ್ತಕದಲ್ಲಿದೆ.
ಕವಿ, ಲೇಖಕಿ ದೀಪಾ ಹಿರೇಗುತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದವರು. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಕನ್ನಡದ ಸಶಕ್ತ ಅಂಕಣಗಾರ್ತಿ ಎಂಬುದನ್ನು “ನಾನು, ನೀವು ಮತ್ತು ...” ಅಂಕಣ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. 'ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ. ದಸರಾ ಕವಿಗೋಷ್ಠಿ, ಸಂಕ್ರಮಣ, ಪ್ರಜಾವಾಣಿ ಸಂಚಯ, ತಿಂಗಳು ಕವನಸರ್ಧೆಯಲ್ಲಿ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಲೇಖಕರ ಸಂಘದಿಂದ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ...
READ MORE