ತುಷಾರ ಮಾಸಿಕದಲ್ಲಿ ಪ್ರಕಟಗೊಂಡ `ಕಾವ್ಯಾ ಕಾಲಂ' ಅಂಕಣ ಬರಹಗಳ ಸಂಕಲನ `ದೂರದೇಶವೆಂಬ ಪಕ್ಕದ ಮನೆ’. ಹಿರಿಯ ವಿಮರ್ಶಕ ಡಾ.ರಹಮತ ತರೀಕೆರೆ ಮುನ್ನುಡಿ ಬರೆದಿದ್ದು ಒಟ್ಟು 23 ಪ್ರಬಂಧಗಳಿವೆ.
ಅಮಾನುಷವಾಗಿರುವ ಎಲ್ಲ ಸಮಾಜಗಳ ಆಲೋಚನೆ ಮತ್ತು ಜೀವನಕ್ರಮ ಬದಲಾಗಬೇಕು ಎಂಬ ಒತ್ತಾಸೆಗಳಂತಿರುವ ಬರಹಗಳಿವು. ಅಮೇರಿಕೆಯ ಜನ ಜೀವನದ ಅನುಭವಗಳು ಹಾಗೂ ಜೀವನ ಪ್ರೀತಿಯನ್ನು ಈ ಪ್ರಬಂಧಗಳು ಬಿಂಬಿಸುತ್ತವೆ.
ಜೊತಗೆ ಸ್ತ್ರೀಪರ ಚಿಂತನೆಗಳ ಮೂಲಕ ಮಹತ್ವದ ಪ್ರಶ್ನೆಗಳನ್ನೂ ಲೇಖಕಿ ಎತ್ತಿದ್ದಾರೆ. ಲವಲವಿಕೆಯಿಂದ ಕೂಡಿರುವ ಇಲ್ಲಿನ ಬರಹಗಳು ಹೆಚ್ಚು ಆಪ್ತವೆನಿಸುತ್ತವೆ.
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. 1988ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಮಾಕೋನ ಏಕಾಂತ’, ‘ತೊಟ್ಟು ಕ್ರಾಂತಿ’ ಕಥಾ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ’ ಮತ್ತು ‘ಡೋರ್ ನಂಬರ್ ಎಂಟು’ ಹಾಗೂ ‘ಸಂಜೀವಿನಿ ಸ್ಟೋರ್ಸ್’ ನಾಟಕ ಸಂಕಲನಗಳು. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಪದ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ...
READ MORE