ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣಬರಹಗಳ ಸಂಗ್ರಹ ರೂಪ ಚೌಕಟ್ಟಿನಾಚೆ. ಸಾದಾ ಹಳ್ಳಿಗನ ನಿರ್ಭಿಡೆಯ ನೇರ ನುಡಿ ಮತ್ತು ರಾಜಧಾನಿಯ ಪತ್ರಕರ್ತನ ಸೂಕ್ಷ ಪರಿಣತಿ - ಇವೆರಡರ ಒಂದು ವಿಶಿಷ್ಟ ಸಂಗಮ ಪದ್ಮರಾಜ ದಂಡಾವತಿಯವರ ಬರಹಗಳಲ್ಲಿದೆ. ಉದಾಹರಣೆಗೆ, ಸರ್ಕಾರಿ ಶಾಲೆಗಳಲ್ಲಿ ಜಾತಿಭೇದ ಮಾಡುವ ಯೋಜನೆಗಳನ್ನು ತರುವುದು ತಪ್ಪೆಂದು ಅವರು ವಾದಿಸುವಾಗ ಅದರ ಹಿಂದೆ ಹಳ್ಳಿಗನ ನಿರ್ಭಿಡೆಯ ನುಡಿ ಕಂಡರೆ, ಅಸ್ಮಿತೆಯ ರಾಜಕಾರಣದ ಐತಿಹಾಸಿಕ ಮಜಲುಗಳ ಕಥನವನ್ನು ಅವರು ಮಾಡುತ್ತಿರುವಾಗ ನಮಗೆ ಪರಿಣತ ಪತ್ರಕರ್ತನೊಬ್ಬನ ಸೂಕ್ಷ ಜ್ಞತೆ ಎದುರಾಗುತ್ತದೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು. ಕೃತಿಗಳು: ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...
READ MORE