ಸೀಮೋಲ್ಲಂಘನ -ಭಾಗ-2- I ಕೃತಿಯು ಪ್ರಜಾವಾಣಿಯಲ್ಲಿ ಅಂಕಣವಾಗಿ ಪ್ರಕಟವಾದ ಸುಧೀಂದ್ರ ಬುಧ್ಯ ಅವರ ಲೇಖನಗಳ ಸಂಕಲನವಾಗಿದೆ. ಇಲ್ಲದಂತೆ ಕಾಣುವ ಘಟನೆಗಳನ್ನು, ವಿದ್ಯಮಾನಗಳನ್ನು ಒಂದು ಚೌಕಟ್ಟಿಗೆ ತಂದು ಓದುಗರಿಗೆ ತಲುಪಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ.
ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ. ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಓದಿದ್ದು ಇಂಜಿನಿಯರಿಂಗ್. ಆಸಕ್ತಿ ಸಾಹಿತ್ಯ ಮತ್ತು ಪತ್ರಿಕೋದ್ಯಮ. ಚೆನ್ನೈ, ಬೆಂಗಳೂರು, ಅಮೆರಿಕದ ಸಿನ್ಸಿನಾಟಿ, ಚಿಕಾಗೋ ನಗರಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ನಡೆಸಿದ ಅನುಭವ. ಸೃಜನಶೀಲ ಲೇಖಕ, ಕತೆಗಾರ, ಅಂಕಣಕಾರ, ರಾಜ್ಯಮಟ್ಟದ ಹಲವು ಜನಪ್ರಿಯ ಪತ್ರಿಕೆಗಳಲ್ಲಿ ನೂರಾರು ಬರಹಗಳು ಪ್ರಕಟವಾಗಿವೆ. ‘ಹೊಸದಿಗಂತ’ ಪತ್ರಿಕೆಯಲ್ಲಿ 2011ರಿಂದ 2014ರವರೆಗೆ ‘ಪರದೇಶಿ ಪರಪಂಚ’ ಅಂಕಣ, ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಕೈಗೊಂಡ ಚೊಚ್ಚಲ ಅಮೆರಿಕ ಪ್ರವಾಸ ಕುರಿತ ವರದಿ ‘ಅಂಕಲ್ ಸ್ಯಾಮ್ ಅಂಗಳದಲ್ಲಿ ಮೋದಿ ಮೋಡಿ’, ಅಮೆರಿಕ ...
READ MORE