'ಮೊದಲ ಹೆಜ್ಜೆ'ಯಲ್ಲಿ ಒಟ್ಟು ಮುವತ್ನಾಲ್ಕು ಅಂಕಣ ಲೇಖನಗಳಿವೆ. ಇಲ್ಲಿನ ಬರಹಗಳು ಸಮಾಜ ಕೇಂದ್ರೀಕೃತ ಹಾಗೂ ಆತ್ಮಕೇಂದ್ರಿತವಾಗಿವೆ. ಬರಹದ ವಿಷಯಗಳು ಬಾಲ್ಯದ ನೆನಪು, ಪರಿಸರ, ರಾಜಕಾರಣ ಸಾಹಿತ್ಯ, ಕೋಮುವಾದ, ಬ್ಯಾಂಕಿನ ವಂಚನೆ, ರಾಜಕಾರಣ ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಅವರು ಬರೆದಿದ್ದಾರೆ.
ಅಲ್ಲದೆ “ಗೋವಿಂದೇಗೌಡರಿಗೆ ಸನ್ಮಾನ” ಎಂಬ ಲೇಖನ, ಗೌಡರನ್ನು ಕುರಿತು ಅವರ ಮೊದಲಿನ ನಿಲುವು ಬದಲಾದುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿನ ಲೇಖನಗಳನ್ನು ಒಂದೇ ಸೂತ್ರದಲ್ಲಿ ಬಂಧಿಸಿಡಲು ಸಾಧ್ಯವಾಗದ ಕೃತಿ.
ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ ಬೆಳೆದವರು. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿದೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲಲ್ಲಿ ಜನಿಸಿದ ಅವರು ಹಿಡಿದು ಕಗ್ಗಾಡಿನ ನಡುವಿನ ಗೀರ್ಲುವಿನ ಹಳ್ಳಿಗನೊಬ್ಬನಾಗಿ ಬಾಳಿದರು. ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ’ಶೀರ್ನಾಳಿ, ಬೇರು ಪ್ರೀತಿ, ವಿಮರ್ಶಕರ ಅಧ್ವಾನಗಳು’ ಅವರ ಕೃತಿಗಳು. ...
READ MORE