ಪರಿಮಳಿಸುವ ಪ್ರೇಮಪತ್ರಗಳು ಎಂಬ ಶೀರ್ಷಿಕೆಯಡಿ ಲೇಖಕ ಸ. ರಘುನಾಥ ಅವರ ಅಂಕಣಗಳ ಬರಹ ಕೃತಿ-ಮಲ್ಲಿಗೆ ಮರುಗ. ಒಟ್ಟು 25 ಕಿರು ಲೇಖನಗಳನ್ನು ಒಳಗೊಂಡಿದೆ. ಹಿರಿಯ ಸಾಹಿತಿ ಎನ್.ನರಹರಿ ಅವರು ಕೃತಿಗೆ ಮುನ್ನುಡಿ ಬರೆದು ‘ ಇಲ್ಲಿಯ ಬರಹಗಳು ಪ್ರಚಲಿತ ವಿದ್ಯಮಾನಗಳನ್ನು ಕುರಿತು ಬರೆಯುವುದರೊಂದಿಗೆ, ಭಾವತೀವ್ರತೆಗೆ ಒತ್ತುಕೊಡುವ ಪ್ರೇಮ-ಪ್ರಣಯ ಕುರಿತಾದ ವಿಚಾರಲಹರಿಯ ಲೇಖನಗಳನ್ನೂ ಪತ್ರಿಕೆಯೊಂದರ ‘ಅಂಕಣ’ದಲ್ಲಿ ಬರೆದದ್ದು, ಮುಖ್ಯವಾಗಿ ಗಂಡು ಹೆಣ್ಣಿನ ಅಂತರಂಗದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಪ್ರೀತಿ-ಪ್ರೇಮ-ಪ್ರಣಯಗಳಿಗೆ ಅಭಿವ್ಯಕ್ತರೂಪವನ್ನು ಸ್ವಗತ-ಸಂವಾದ ರೂಪದಲ್ಲೋ, ಪತ್ರ ವ್ಯವಹಾರದಲ್ಲೋ ನೀಡುವ ಪ್ರಯತ್ನ ಇಲ್ಲಿ ನಡೆದಿದೆ. ಪ್ರೇಮಿಗಳಿಬ್ಬರ ಭಾವಸಂಚಾರದ ನಡುವೆ ಒಂದಷ್ಟು ಪೊಷಕ ಪಾತ್ರಗಳು ಅಲ್ಲಲ್ಲಿ ಮಿಂಚಿ ಮರೆಯಾಗುತ್ತವೆ. ನಿಸರ್ಗದ ಸೂಕ್ಷ್ಮಗಳನ್ನು, ಸುತ್ತಲಿನ ಪರಿಸರವನ್ನು, ಗ್ರಾಮೀಣ ಹಿನ್ನೆಲೆಯನ್ನು, ಬೇಸಾಯದ ಆಳ-ಹರಹುಗಳನ್ನು, ಮನುಷ್ಯಸಂಬಂಧ ವಾಸ್ತವಗಳನ್ನು ಲೇಖಕರು ಪರಿಣಾಮಕಾರಿಯಾಗಿ ಹಾಗೂ ಪೂರಕವಾಗಿ ಬಳಸಿಕೊಳ್ಳುತ್ತಾರೆ. ಇಲ್ಲಿನ ಎಲ್ಲ ಬರಹಗಳು ಒಂದೊಂದು ಪುಟ್ಟಕಾವ್ಯದಂತಿವೆ. ಮೇಲ್ನೋಟಕ್ಕೆ ಗದ್ಯದಂತೆ ಕಂಡರೂ, ಓದಿನಲ್ಲಿ ಕಾವ್ಯದ ಅನುಭವಕೊಡುತ್ತವೆ.. ಗದ್ಯದ ಭಾಷೆಯನ್ನು ಕಾವ್ಯೀಕರಿಸಿದ್ದಾರೆ. ಅದಕ್ಕೆ ಜಾನಪದೀಯ ಸೊಡಗನ್ನು ಲೇಪಿಸಿದ್ದಾರೆ. ಅಲಲ್ಲಿ ಹಳ್ಳಿಗರ ಹಾಡಿನ ತುಣುಕುಗಳಿವೆ, ಜೊತೆಗೆ ಕವಿಯದೇ ಆದ ಶಿಷ್ಟಕಾವ್ಯದ ಹನಿಗಳೂ ಇವೆ. ನಮ್ಮ ಕವಿಪರಂಪರೆಯ ಝುಲಕುಗಳನ್ನು ಸಮಯೋಜಿತವಾಗಿ ಮೆಲಕುಹಾಕಿದ್ದಾರೆ. ಬಹಳಷ್ಟು ಲೇಖನಗಳಲ್ಲಿ ‘ಕನಸು’ ಸ್ಥಾಯಿಯಾಗುತ್ತದೆ. ಗಂಡು-ಹೆಣ್ಣು ವಾಸ್ತವದಲ್ಲಿ ಕೂಡಲಾಗದ ನೋವು, ಕೂಡುವಾಗಿನ ನಲಿವು ಕನಸಿನಲ್ಲಿ ಸಾಕಾರಗೊಳ್ಳುತ್ತವೆ. ಕೆಲವೊಮ್ಮೆ ಪತ್ರಮುಖೇನ ಪ್ರಕಟವಾಗುತ್ತವೆ. ಹಾಗಾಗಿ ಮೂರ್ತ ಅನುಭವಕ್ಕಿಂತ ಅಮೂರ್ತ ಭಾವಗಳೇ ಇಲ್ಲಿ ಧ್ವನಿಸುತ್ತವೆ, ರೂಪ ಪಡೆಯುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE